ಕರ್ನಾಟಕ

karnataka

ETV Bharat / city

ಬೊಮ್ಮಾಯಿ ಬಳಗದ ಜಾತಿ ಲೆಕ್ಕಾಚಾರ: ನೂತನ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, 'ಹಿಂದ್​'ಗೆ ಮಣೆ! - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

9 ಲಿಂಗಾಯತ, 7 ಮಂದಿ ಒಬಿಸಿ, 7 ಒಕ್ಕಲಿಗ, 3 ಎಸ್​ಸಿ, 1 ಎಸ್​ಟಿ ಹಾಗೂ ಇಬ್ಬರು ಬ್ರಾಹ್ಮಣರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಒದಗಿಸಲು ಯತ್ನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

caste-wise-distribution-of-ministerial-post-in-new-cabinet
caste-wise-distribution-of-ministerial-post-in-new-cabinet

By

Published : Aug 4, 2021, 5:00 PM IST

Updated : Aug 4, 2021, 7:02 PM IST

ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ ನೂತನ ಮಂತ್ರಿ ಮಂಡಲದಲ್ಲಿ ಜಾತಿವಾರು ಲೆಕ್ಕಾಚಾರಕ್ಕೆ ಮಣೆ‌ ಹಾಕಲಾಗಿದೆ. ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಆದ್ಯತೆ ನೀಡುವುದರ ಜೊತೆಗೆ 'ಹಿಂದ್​'ಗೂ ಒತ್ತು ನೀಡಲಾಗಿದೆ.

ಹೌದು, ಕೊನೆಗೂ ಬೊಮ್ಮಾಯಿ ಸಂಪುಟ ಬಳಗ ರಚನೆಯಾಗಿದೆ. ದೆಹಲಿಯಲ್ಲಿ ಮೂರು ದಿನಗಳ ಕಾಲ ಕಸರತ್ತು ನಡೆಸಿದ ಸಿಎಂ ಬೊಮ್ಮಾಯಿ ಜಾತಿ ಲೆಕ್ಕಾಚಾರದೊಂದಿಗೆ ಸಮತೋಲನದ ಮಂತ್ರಿ ಮಂಡಲ ರಚಿಸಲು ಯತ್ನಿಸಿದ್ದಾರೆ. ನಿರೀಕ್ಷೆಯಂತೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸಂಪುಟದಲ್ಲಿ ಸಿಂಹಪಾಲು ನೀಡಿದ್ದರೆ, ಬಳಿಕ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಲಾಗಿದೆ.

ತಮ್ಮ ಮಂತ್ರಿ ಮಂಡಲದಲ್ಲಿ ಬೊಮ್ಮಾಯಿ 'ಹಿಂದ್​'ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮತೋಲಿತ ಸಚಿವ ಸಂಪುಟ ರಚಿಸಲು ಯತ್ನಿಸಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ದೆಹಲಿ ವರಿಷ್ಠರು ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದಾರೆ. 9 ಲಿಂಗಾಯತ, 7 ಮಂದಿ ಒಬಿಸಿ, 7 ಒಕ್ಕಲಿಗ, 3 ಎಸ್​ಸಿ, 1 ಎಸ್​ಟಿ ಹಾಗೂ 2 ಬ್ರಾಹ್ಮಣರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಒದಗಿಸಲು ಯತ್ನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಮಾಧ್ಯಮಗೋಷ್ಟಿ

ಆದರೂ ಕೆಲ ಸಮುದಾಯಗಳಿಗೆ ಸಂಪುಟದಲ್ಲಿ ಸ್ಥಾನ ಸಿಗದೇ ಇರುವ ಬಗ್ಗೆ ಅಪಸ್ವರ ಕೇಳಿಬಂದಿದೆ. ಪ್ರಮುಖವಾಗಿ ಭೋವಿ, ಯಾದವ, ನೇಕಾರರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ ಎಂಬ ಕೂಗು ಕೇಳಿ ಬಂದಿದೆ.

ಬೊಮ್ಮಾಯಿ ಬಳಗದ ಜಾತಿ ಲೆಕ್ಕ:

ಉಮೇಶ್ ಕತ್ತಿ - ಲಿಂಗಾಯತ
ಸಿ ಸಿ ಪಾಟೀಲ್ - ಲಿಂಗಾಯತ
ವಿ. ಸೋಮಣ್ಣ - ಲಿಂಗಾಯತ
ಮಾಧುಸ್ವಾಮಿ - ಲಿಂಗಾಯತ
ಹಾಲಪ್ಪ ಆಚಾರ್ - ಲಿಂಗಾಯತ (ರೆಡ್ಡಿ)
ಶಶಿಕಲಾ ಜೊಲ್ಲೆ - ಲಿಂಗಾಯತ
ಮುರುಗೇಶ್ ನಿರಾಣಿ - ಲಿಂಗಾಯತ
ಬಿ.ಸಿ. ಪಾಟೀಲ್ - ಲಿಂಗಾಯತ
ಶಂಕರ್ ಪಾಟೀಲ್ ಮುನೇನಕೊಪ್ಪ - ಲಿಂಗಾಯತ

ಆರ್.ಅಶೋಕ್ - ಒಕ್ಕಲಿಗ
ಡಾ.ಸಿ.ಎನ್. ಅಶ್ವತ್ಥ ನಾರಾಯಣ - ಒಕ್ಕಲಿಗ
ಎಸ್.ಟಿ. ಸೋಮಶೇಖರ್ - ಒಕ್ಕಲಿಗ
ಡಾ.ಕೆ.ಸುಧಾಕರ್ - ಒಕ್ಕಲಿಗ
ಕೆ.ಸಿ. ನಾರಾಯಣ್ ಗೌಡ - ಒಕ್ಕಲಿಗ
ಗೋಪಾಲಯ್ಯ - ಒಕ್ಕಲಿಗ
ಆರಗ ಜ್ಞಾನೇಂದ್ರ - ಒಕ್ಕಲಿಗ

ಆನಂದ ಸಿಂಗ್ - ರಜಪೂತ (ಒಬಿಸಿ)
ಕೋಟಾ ಶ್ರೀನಿವಾಸ ಪೂಜಾರಿ - ಬಿಲ್ಲವ (ಒಬಿಸಿ)
ಸುನೀಲ್ ಕುಮಾರ್ - ಬಿಲ್ಲವ(ಒಬಿಸಿ)
ಎಂ.ಟಿ.ಬಿ ನಾಗರಾಜ್ - ಕುರುಬ (ಒಬಿಸಿ)
ಕೆ.ಎಸ್.ಈಶ್ವರಪ್ಪ - ಕುರುಬ (ಒಬಿಸಿ)
ಬೈರತಿ ಬಸವರಾಜ - ಕುರುಬ (ಒಬಿಸಿ)
ಮುನಿರತ್ನ - ನಾಯ್ಡು (ಒಬಿಸಿ)

ಅಂಗಾರ - ಎಸ್‌ಸಿ
ಗೋವಿಂದ ಕಾರಜೋಳ - ಎಸ್‌ಸಿ (ಎಡ)
ಪ್ರಭು ಚವ್ಹಾಣ್​​ - ಮರಾಠ ಲಂಬಾಣಿ (ಎಸ್‌ಸಿ )
ಬಿ. ಶ್ರೀರಾಮುಲು - ವಾಲ್ಮೀಕಿ (ಎಸ್‌ಟಿ )

ಬಿ ಸಿ ನಾಗೇಶ್ - ಬ್ರಾಹ್ಮಣ
ಶಿವರಾಂ ಹೆಬ್ಬಾರ - ಬ್ರಾಹ್ಮಣ

Last Updated : Aug 4, 2021, 7:02 PM IST

ABOUT THE AUTHOR

...view details