ಆನೇಕಲ್ (ಬೆಂಗಳೂರು): ನಗರದ ಹೊರವಲಯದ ಸರ್ಜಾಪುರ ಬಳಿ ಡಬಲ್ ಬ್ಯಾರೆಲ್ ಬಂದೂಕಿನಿಂದ ದುಷ್ಕರ್ಮಿಗಳು ಬೆಕ್ಕಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದು, ಈ ಸಂಬಂಧ ಬೆಕ್ಕಿನ ಮಾಲಿಕ ಅಬ್ರಹಾಂ ಆಂತೋಣಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ:

ದುಷ್ಕರ್ಮಿಗಳು ಸರ್ಜಾಪುರ ಮತ್ತು ಬಾಗಲೂರು ರಸ್ತೆಯಲ್ಲಿರುವ ಸ್ಕೈ ಲೈಟ್ ಲೇಔಟ್ನಲ್ಲಿ ಅಬ್ರಹಾಂ ಆಂತೋಣಿಯವರ ಮನೆಯ ಆವರಣದ ಗೋಡೆಗೆ ಹೊಂದಿಕೊಂಡಂತೆ ತಿಂಡ್ಲುವಿನ ಖಾಸಗಿ 5 ಎಕರೆಯ ಹುಲ್ಲಿನ ಬಯಲಿದೆ. ಸಹಜವಾಗಿ ಇಲ್ಲಿ ಮೊಲಗಳು, ಇಲಿಗಳು ಓಡಾಡುತ್ತಿರುತ್ತವೆ. ಇವುಗಳನ್ನು ಹಿಡಿಯಲು ಯತ್ನಿಸಿರುವ ದುಷ್ಕರ್ಮಿಗಳು ಬೆಕ್ಕಿನ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ಗುಂಡಿನ ಸದ್ದು ಕೇಳಿ ಹೊರಬಂದ ಆಂತೋಣಿ ಮತ್ತು ಅವರ ಪತ್ನಿ ಶೀಲಾ ಬೇಟೆಗಾರರನ್ನು ಕಂಡು ವಿಚಾರಿಸಿದ್ದಾರೆ. ಮೊಲ ಬೇಟೆಯಾಡುವುದಕ್ಕೆ ಬಂದಿದ್ದೆವು ಎಂದು ಹೊರಟು ಹೋಗಿದ್ದಾರೆ. ಬೆಕ್ಕಿನ ಸತ್ತ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.
ಇನ್ನು, ಪಕ್ಕದ ವಿಲ್ಲಾದಲ್ಲಿರುವ ಮನೆಯಲ್ಲಿಯೂ ಮೂರು ಬೆಕ್ಕುಗಳಿದ್ದು, ಆಂತೋಣಿ ಮನೆಯ ಬೆಕ್ಕು ಪಕ್ಕದ ಮನೆಯ ಬೆಕ್ಕುಗಳೊಂದಿಗೆ ಹಾಲು ಕುಡಿಯಲು ಬರುತ್ತದೆ ಎಂದು ಜಗಳ ನಡೆದು ಸರ್ಜಾಪುರ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಬೆಕ್ಕಿನ ಸಾವಿಗೆ ಯಾರು ಕಾರಣ ಎಂಬುದು ತಿಳಿದುಬಂದಿಲ್ಲ. ಹೀಗಾಗಿ ಬೆಕ್ಕಿನ ಮಾಲೀಕ ಅಬ್ರಹಾಂ ಆಂತೋಣಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಕ್ಕಿನ ಮರಣೋತ್ತರ ಪರೀಕ್ಷೆ ಮಾಡಿಸಿ ಎಫ್ಎಸ್ಎಲ್ ವರದಿಗಾಗಿ ಅಂಗಾಂಗಗಳ ಮಾದರಿಯನ್ನು ಕಳಿಸಿಕೊಟ್ಟಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.