ಕರ್ನಾಟಕ

karnataka

ETV Bharat / city

ರಿಷಿಕಾ ಸಿಂಗ್ ಕಾರು ಅಪಘಾತ ಪ್ರಕರಣ...ಚಾಲಕನ ಮೇಲೆ ಕೇಸ್ ದಾಖಲು - Sandalwood actress Rishika sing

ನಟಿ ರಿಷಿಕಾ ಸಿಂಗ್, ತಮ್ಮ ಸಂಬಂಧಿ ಅರ್ಪಿತಾ ಜೊತೆ ನಿನ್ನೆ ಸಂಬಂಧಿಕರ ಮನೆಯಿಂದ ವಾಪಸ್ ಬರುವಾಗ ಯಲಹಂಕ ಬಳಿ ಕಾರು ಅಪಘಾತ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಿಕಾ ಕಾರು ಚಾಲಕ ಆರ್ಯ ಮೇಲೆ ಕೇಸ್ ದಾಖಲಾಗಿದೆ.

Rishika sing car accident
ರಿಷಿಕಾ ಸಿಂಗ್

By

Published : Jul 31, 2020, 1:43 PM IST

ಸ್ಯಾಂಡಲ್​ವುಡ್​​​ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯಲಹಂಕ ಸಂಚಾರಿ ಠಾಣೆಯಲ್ಲಿ ಎಫ್​​​​ಐಆರ್ ದಾಖಲಾಗಿದೆ.

ಅಪಘಾತದಲ್ಲಿ ಜಖಂಗೊಂಡಿರುವ ಕಾರು

ನಿನ್ನೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಹಾಗೂ ಜೈ ಜಗದೀಶ್ ಮೊದಲ ಪುತ್ರಿ ಅರ್ಪಿತಾ, ಸಂಬಂಧಿಕರ ಮನೆಯಿಂದ ಪಾರ್ಟಿ ಮುಗಿಸಿ ವಾಪಸ್ ನಗರಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ. ಚಾಲಕನ ಅಜಾಕರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ರಿಷಿಕಾ ಹಾಗೂ ಅರ್ಪಿತಾ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಈ ಕಾರಣ ಡ್ರೈವರ್ ಮೇಲೆ ಕೇಸ್ ದಾಖಲಾಗಿದೆ. ಚಾಲಕ ಆರ್ಯ ಮೇಲೆ ಐಪಿಸಿ ಸೆಕ್ಷನ್ 279, 338 ಅಡಿ ಪ್ರಕರಣ ದಾಖಲಾಗಿದೆ.

ರಿಷಿಕಾ ಸಿಂಗ್

ಯಲಹಂಕದ ಮಾವಳ್ಳಿಪುರ ರಸ್ತೆ ತಿರುವಿನ ಬಳಿ ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿತ್ತು. ಈ ವೇಳೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಅದಷ್ಟವಶಾತ್ ಚಾಲಕ , ರಿಷಿಕಾ ಹಾಗೂ ಅರ್ಪಿತಾಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದಾರೆ.

ABOUT THE AUTHOR

...view details