ಕರ್ನಾಟಕ

karnataka

ETV Bharat / city

ಕೇಸ್​ ದಾಖಲಿಸಿ ಸಭಾಪತಿ ಪೀಠಕ್ಕೆ ಅಪಮಾನ: 48 ಗಂಟೆಗಳಲ್ಲಿ ಕ್ರಮ- ಸಿಎಂ ಬೊಮ್ಮಾಯಿ

ದಯವಿಟ್ಟು ಅದನ್ನು ಮತ್ತೆ ಪ್ರದೇಶಾಭಿವೃದ್ಧಿ ನಿಧಿಗೆ ವರ್ಗಾಯಿಸಬೇಕು ಎಂದು ಜೆಡಿಎಸ್‌ನ ಶ್ರೀಕಂಠೇಗೌಡ ಭಿನ್ನವಿಸಿಕೊಂಡರು. ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರು, ನಿಧಿಯನ್ನ ವಾಪಸ್ ಪಡೆಯುವುದಿಲ್ಲ ಎಂದು ಭರವಸೆ ನೀಡಿದರು..

basavaraj-horatti
ಸಭಾಪತಿ ಪೀಠ

By

Published : Mar 29, 2022, 7:03 PM IST

ಬೆಂಗಳೂರು :ಧಾರವಾಡ ಪ್ರಕರಣವೊಂದರಲ್ಲಿ ವಿಧಾನಪರಿಷತ್​ ಸಭಾಪತಿ ಪೀಠಕ್ಕೆ ಆಗಿರುವ ಅಪಮಾನಕ್ಕೆ ಸಂಬಂಧಿಸಿದಂತೆ ಮುಂದಿನ 48 ಗಂಟೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ವಿಧಾನಪರಿಷತ್​ನಲ್ಲಿ ಇಂದು ಜೆಡಿಎಸ್ ಸದಸ್ಯ ಭೋಜೇಗೌಡ ಅವರು, ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ದಾಖಲಾದ ಪ್ರಕರಣವನ್ನು ಸಿಎಂ ಸಮ್ಮುಖದಲ್ಲಿ ಪ್ರಸ್ತಾಪಿಸಿದರು.

ಸಭಾಪತಿಗಳ ವಿರುದ್ಧವೇ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ರಾತ್ರಿ 12 ಗಂಟೆಗೆ ಪ್ರಕರಣ ದಾಖಲಾಗಿ, ಬೆಳಗಿನ ಜಾವ ಎಸ್​ಪಿ ಕರೆ ಮಾಡಿ ಕ್ಷಮೆ ಕೋರಿದ್ದಾರೆ. ಇದು ಸೂಕ್ತವಲ್ಲ. ಸಂಬಂಧಿಸಿದ ಅಧಿಕಾರಿಯನ್ನು ವಜಾಗೊಳಿಸಬೇಕು. ಕೇವಲ ಒಬ್ಬ ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿದರೆ ಪರಿಹಾರ ಸಿಗುವುದಿಲ್ಲ ಎಂದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಇಂತಹ ಕಾರ್ಯ ಆಗಿ ಇಷ್ಟು ದಿನ ಕಳೆದರೂ ಪೀಠಕ್ಕೆ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ಕೂಡಲೇ ಕ್ರಮ ಆಗಬೇಕು ಎಂದರು. ಇದಕ್ಕೆ ಉತ್ತರಿಸಿದ ಸಿಎಂ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಾಹಿತಿ ಸಂಗ್ರಹಿಸಲಾಗಿದೆ. ಎಸ್​ಪಿಯಿಂದ ಲಿಖಿತ ಮಾಹಿತಿ ಕೇಳಲಾಗಿದೆ. ಅದು ಲಭಿಸುತ್ತಿದ್ದಂತೆ ಕ್ರಮಕೈಗೊಳ್ಳುತ್ತೇವೆ. ಆದರೆ, ಬರವಣಿಗೆ ರೂಪದಲ್ಲಿ ವಿವರಣೆ ಸಿಕ್ಕರೆ ಕ್ರಮಕ್ಕೆ ಅನುಕೂಲ ಆಗಲಿದೆ ಎಂದರು.

ಈ ವೇಳೆ ಪ್ರತಿಪಕ್ಷ ನಾಯಕರೂ ಸೇರಿದಂತೆ ಇತರೆ ಸದಸ್ಯರು ಒಕ್ಕೊರಲಿನಿಂದ ಪೀಠಕ್ಕೆ ಶೀಘ್ರವೇ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಡ ಹೇರಿದ ಹಿನ್ನೆಲೆಯಲ್ಲಿ, ಮುಂದಿನ 48 ಗಂಟೆಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯ ಭರವಸೆ ನೀಡಿದರು.

ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಿಸಿ :ಈ ಹಿಂದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ವಾರ್ಷಿಕವಾಗಿ 2 ಕೋಟಿ ರೂಪಾಯಿ ನೀಡಲಾಗುತ್ತಿತ್ತು. ಈ ಅನುದಾನವನ್ನು ಹಿಂಪಡೆಯುವ ಪದ್ಧತಿ ಇರಲಿಲ್ಲ. ಆದರೆ, ಈ ಬಾರಿ ಅನುದಾನ ವಾಪಸ್ ಪಡೆದಿದ್ದಾರೆ. ದಯವಿಟ್ಟು ಅದನ್ನು ಮತ್ತೆ ಪ್ರದೇಶಾಭಿವೃದ್ಧಿ ನಿಧಿಗೆ ವರ್ಗಾಯಿಸಬೇಕು ಎಂದು ಜೆಡಿಎಸ್‌ನ ಶ್ರೀಕಂಠೇಗೌಡ ಭಿನ್ನವಿಸಿಕೊಂಡರು. ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರು, ನಿಧಿಯನ್ನ ವಾಪಸ್ ಪಡೆಯುವುದಿಲ್ಲ ಎಂದು ಭರವಸೆ ನೀಡಿದರು. ಆಯಾ ವರ್ಷದಲ್ಲಿ ಖರ್ಚಾಗದ ಹಣವನ್ನು ಖರ್ಚು ಮಾಡುವಂತೆ ಸಚಿವರು ಸತ್ತೋಲೆ ಹೊರಡಿಸಿದ್ದಾರೆ ಎಂದು ಹೇಳಿದರು.

ಓದಿ:ಮಹದಾಯಿ ಯೋಜನೆ ಜಾರಿಗೆ ಬದ್ಧ: ಸಚಿವ ಗೋವಿಂದ ಕಾರಜೋಳ

ABOUT THE AUTHOR

...view details