ಬೆಂಗಳೂರು: ಬೆಂಗಳೂರಿನಲ್ಲಿ ಕಾರುಗಳನ್ನು ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ: ಮೂವರು ಸೆರೆ
ಬೆಂಗಳೂರಿನಲ್ಲಿ ಕಾರುಗಳನ್ನು ಕದ್ದು ತುಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 1 ಕೋಟಿ 55 ಲಕ್ಷ ರೂ. ಮೌಲ್ಯದ 6 ಇನೋವಾ, 1 ಟೊಯೋಟಾ ಇಟಿಯೋಸ್ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಗೋಪಿ, ಇಮ್ಯಾನ್ಯುಯಲ್ ಹಾಗೂ ಮೋಹನ್ ರಾಜು ಬಂಧಿತರು. ಆರೋಪಿಗಳ ಪೈಕಿ ಗೋಪಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಬೇಗೂರು ಪೊಲೀಸರಿಂದ ಬಂಧಿತನಾಗಿದ್ದು, ವಿಚಾರಣೆ ವೇಳೆ ಇಮ್ಯಾನ್ಯುಯಲ್, ಮೋಹನ್ ರಾಜು ಜೊತೆ ಸೇರಿ ಕಾರು ಕಳ್ಳತನದ ದಂಧೆಯಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದ.
ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅವುಗಳಿಗೆ ಬೇರೆ ಆ್ಯಕ್ಸಿಡೆಂಟ್ ಆದ ಗುಜರಿಗೆ ಕಳಿಸಲಾದ ಕಾರುಗಳ ಚಾಸ್ಸಿ ನಂಬರ್ ಜೋಡಿಸಿ ತಮಿಳುನಾಡು ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಮೂವರೂ ಆರೋಪಿಗಳನ್ನು ಬಂಧಿಸಿರುವ ಬೇಗೂರು ಠಾಣಾ ಪೊಲೀಸರು ಬರೋಬ್ಬರಿ 1 ಕೋಟಿ 55 ಲಕ್ಷ ರೂ. ಮೌಲ್ಯದ 6 ಇನೋವಾ, 1 ಟೊಯೋಟಾ ಇಟಿಯೋಸ್ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.