ಕರ್ನಾಟಕ

karnataka

ETV Bharat / city

ಟೆಸ್ಟ್ ಡ್ರೈವ್ ನೆಪದಲ್ಲಿ ಕಾರು ಕಳ್ಳತನ : ಬೆಂಗಳೂರು ಪೊಲೀಸರ ಅಥಿತಿಯಾದ ಆರೋಪಿ - ಖರೀದಿ ನೆಪದಲ್ಲಿ ಕಾರ ಕಳ್ಳತನ

ಟೆಸ್ಟ್​​ ಡ್ರೈವ್​ ನೆಪದಲ್ಲಿ ಕಾರು ಕದ್ದು ಪರಾರಿಯಾಗಿದ್ದ ಖತರ್ನಾಕ್​ ಖದೀಮನನ್ನು ಹೆಡೆಮುರಿಕಟ್ಟುವಲ್ಲಿ ಮಹಾಲಕ್ಷ್ಮೀ ಲೇಔಟ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 35 ಲಕ್ಷ ರೂ. ಮೌಲ್ಯದ ಒಟ್ಟು 7 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

car-theft-arrested-by-mahalakshmi-layout-police
ಕಾರು ಕಳ್ಳತನ

By

Published : Nov 25, 2021, 3:51 PM IST

ಬೆಂಗಳೂರು: ಕಾರು ಖರೀದಿಸುವ ಸೋಗಿನಲ್ಲಿ ಬಂದು ಟೆಸ್ಟ್​ ಡ್ರೈವ್​ ಮಾಡುವ ನೆಪದಲ್ಲಿ ಕಾರು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್​​ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೊಡ್ಡಬಳ್ಳಾಪುರ ನಿವಾಸಿ ಶ್ರೀನಿವಾಸ್ ಬಂಧಿತ ಆರೋಪಿ. ಇದೀಗ ಕಂಬಿ ಹಿಂದೆ ನಿಂತಿರುವ ಈತನ ಟೆಸ್ಟ್​ ಡ್ರೈವ್​ ಕಳ್ಳಾಟಕ್ಕೆ ಪೊಲೀಸರು ಬ್ರೇಕ್​ ಹಾಕಿದ್ದಾರೆ.

ಈತ ಮಾರಾಟಕ್ಕಿಟ್ಟಿದ್ದ ಕಾರುಗಳನ್ನ ಖರೀದಿಸುವ ನೆಪದಲ್ಲಿ ಬಂದು ಟೆಸ್ಟ್ ಡ್ರೈವ್​ಗೆಂದು ಕಾರುಗಳನ್ನ ತೆಗೆದುಕೊಂಡು ಹೋಗುತ್ತಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ. ಇದೇ ರೀತಿ ಮಹಾಲಕ್ಷ್ಮೀ ಲೇಔಟ್​ನ ಇಟಿಯೋಸ್ ಕಾರೊಂದನ್ನ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕೊಂಡೊಯ್ದಿದ್ದ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕೇಸ್​ಗೆ ಸಂಬಂಧಿಸಿದಂತೆ ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

7 ಕಾರು ವಶಕ್ಕೆ: ಬಂಧಿತನ ವಿಚಾರಣೆ ವೇಳೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ 35 ಲಕ್ಷ ರೂ. ಮೌಲ್ಯದ 7 ಕಾರುಗಳನ್ನ ಟೆಸ್ಟ್ ಡ್ರೈವ್ ನೆಪದಲ್ಲಿ ಕೊಂಡೊಯ್ದಿರುವುದು ಪತ್ತೆಯಾಗಿದೆ. ಸದ್ಯ ಮಹಾಲಕ್ಷ್ಮಿ‌ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details