ಬೆಂಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಲಿಮಂಗಲದ ಜಿಗಣಿ ಕೆರೆ ಏರಿ ಮೇಲೆ ನಡೆದಿದೆ.
ಟೈರ್ ಸಿಡಿದು ಕಾರು ಪಲ್ಟಿ : ಸ್ಥಳದಲ್ಲೇ ಮಹಿಳೆ ಸಾವು - undefined
ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ಕಾರು ಪಲ್ಟಿ ಹೊಡೆದು ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದ್ದು, ಪರಿಣಾಮ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಲಿಮಂಗಲದ ಜಿಗಣಿ ಕೆರೆ ಏರಿ ಮೇಲೆ ನಡೆದಿದೆ.
![ಟೈರ್ ಸಿಡಿದು ಕಾರು ಪಲ್ಟಿ : ಸ್ಥಳದಲ್ಲೇ ಮಹಿಳೆ ಸಾವು](https://etvbharatimages.akamaized.net/etvbharat/prod-images/768-512-3943377-thumbnail-3x2-lek.jpg)
ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ಕಾರು ಪಲ್ಟಿ
ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ಕಾರು ಪಲ್ಟಿ
ಹುಲಿಮಂಗಲ ಗ್ರಾಮದ ಮಮತಾ (35) ಸಾವನ್ನಪ್ಪಿದ ಮಹಿಳೆ. ಕಾರು ಚಾಲನೆ ಮಾಡುತ್ತಿದ್ದ ಪತಿ ಆನಂದ್ ಕುಮಾರ್ (42) ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಕಾರಿನ ಚಕ್ರ ಸ್ಪೋಟಗೊಂಡಿದೆ. ಪರಿಣಾಮ ಕಾರು ಪಲ್ಟಿ ಹೊಡೆದು ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದೆ.
ಈ ಕುರಿತು ಸ್ಥಳಕ್ಕೆ ಜಿಗಣಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.