ಕರ್ನಾಟಕ

karnataka

ETV Bharat / city

ಗಸ್ತು ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ - ಪೊಲೀಸರಿಗೆ ಗಾಯ

ಪೊಲೀಸ್ ಗಸ್ತು ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಸ್ತು ವಾಹನಕ್ಕೆ ಕಾರು ಡಿಕ್ಕಿ
ಗಸ್ತು ವಾಹನಕ್ಕೆ ಕಾರು ಡಿಕ್ಕಿ

By

Published : Aug 29, 2021, 5:18 AM IST


ದೇವನಹಳ್ಳಿ: ಹೆದ್ದಾರಿಯ ಪೊಲೀಸ್ ಗಸ್ತು ವಾಹನ ಯೂಟರ್ನ್ ತೆಗೆದುಕೊಳ್ಳುವಾಗ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಸಾಯಿಬಾಬಾ ದೇವಾಲಯದ ಬಳಿ ಪೊಲೀಸರ ಗಸ್ತು ವಾಹನ ಯೂಟರ್ನ್‌ ತೆಗೆದುಕೊಳ್ಳುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸ್‌ ವಾಹನ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ಚಾಲಕ ರಾಮಕೃಷ್ಣಪ್ಪ ಹಾಗೂ ಪೊಲೀಸ್‌ ಕಾನ್ಸ್​​ಟೇಬಲ್ ನಾರಾಯಣ್ ರಾವ್ ಗಾಯಗೊಂಡಿದ್ದಾರೆ. ಇತರೆ ವಾಹನ ಸವಾರರು ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆಸಿದ ಟಾಟಾ ಸಫಾರಿಯ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details