ಬೆಂಗಳೂರು:ಝೂಮ್ ಕಾರನ್ನು ಬಾಡಿಗೆ ಪಡೆದ ಇಬ್ಬರು ಯುವಕರು, ಅತೀ ವೇಗದಿಂದ ಚಾಲನೆ ಮಾಡಿ, ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಝೂಮ್ ಕಾರನ್ನು ಬಾಡಿಗೆ ಪಡೆದು ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದ ಯುವಕರು. - undefined
ಝೂಮ್ ಕಾರನ್ನು ಬಾಡಿಗೆ ಪಡೆದ ಇಬ್ಬರು ಯುವಕರು, ಅತೀ ವೇಗದಿಂದ ಚಾಲನೆ ಮಾಡಿ, ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![ಝೂಮ್ ಕಾರನ್ನು ಬಾಡಿಗೆ ಪಡೆದು ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದ ಯುವಕರು.](https://etvbharatimages.akamaized.net/etvbharat/images/768-512-2819411-46-e8f8423d-c61b-4a8e-9f50-46dce29069f1.jpg)
ಝೂಮ್ ಕಾರನ್ನು ಬಾಡಿಗೆ ತೆಗೆದುಕೊಂಡ ಅಬ್ದುಲ್ ರೆಹಮನ್(24) ರೋಷನ್ ಪಾಷಾ (21) ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ಅತೀ ವೇಗವಾಗಿ ಚಾಲನೆ ಮಾಡಿದ್ದಾರೆ. ಅತೀ ವೇಗದಿಂದ ಚಾಲನೆ ಮಾಡುತ್ತಿದ್ದ ಕಾರಣ ನಿಯಂತ್ರಣ ತಪ್ಪಿ, ಪೀಣ್ಯ ಬಳಿಯ ಮೆಟ್ರೋ ಕಂಬಕ್ಕೆ ಗುದ್ದಿ ಅಪಘಾತವಾಗಿದೆ. ತಕ್ಷಣ ಇಬ್ಬರನ್ನೂ ಗೊರಗುಂಟೆ ಪಾಳ್ಯದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ, ಸ್ಥಳ ಮಹಜರು ಮಾಡಿ ಗಾಯಾಳುಗಳ ಹೇಳಿಕೆ ಪಡೆದಿದ್ದಾರೆ. ಈ ಬಗ್ಗೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.