ಬೆಂಗಳೂರು:ನಗರದ ಹೊರವಲಯದಲ್ಲಿರುವ ಹೊಸಕೆರೆಹಳ್ಳಿ ನೈಸ್ ರಸ್ತೆಯ ಸೋಮಪುರ ಗೇಟ್ ಬಳಿ ಕಾರು ಡಿಕ್ಕಿ ಹೊಡೆದು ಊಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ನಡೆದಿದೆ.
ಸೋಮಪುರ ಟೋಲ್ ಬಳಿ ಬುಧವಾರ ರಾತ್ರಿ ಅಫಘಾತ ಸಂಭವಿಸಿರುವುದು ಬೆಳಕಿಗೆ ಬಂದಿದ್ದು, ವರಸಂದ್ರದ ನಿವಾಸಿಗಳಾದ ಗಾಳಿ ಹೊನ್ನಮ್ಮ (68), ಬಿಂದು (28) ಸಾವಿಗೀಡಾಗಿದ್ದಾರೆ.
ಮಹಿಳೆಯರಿಗೆ ಡಿಕ್ಕಿ ಹೊಡೆದ ಕಾರು ನೈಸ್‌ರಸ್ತೆಯ ಕೊನೆಯಲ್ಲಿ ರಾಗಿ ಕಣ ಮಾಡಲಾಗಿತ್ತು. ಇಲ್ಲಿ ಬಿಂದು, ಹೊನ್ನಮ್ಮ ಸೇರಿ 7 ಮಹಿಳೆಯರು ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ಬಳಿಕ ರಸ್ತೆ ಪಕ್ಕದಲ್ಲಿ ಕುಳಿತು ಜತೆಯಾಗಿ ಊಟ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಅಮಲಲ್ಲಿ ಮಚ್ಚು ಬೀಸಿದ ಕುಡುಕ: ಮೈಸೂರಿನಲ್ಲಿ ಒಬ್ಬರ ಸಾವು, ಐವರ ಸ್ಥಿತಿ ಗಂಭೀರ