ಬೆಂಗಳೂರು: ಕರ್ನಾಟಕದಲ್ಲಿ ಪ್ರತಿ ಬೋರ್ಡ್‌ಗಳು ಕನ್ನಡದಲ್ಲಿರಬೇಕೆಂಬುದು ಕಡ್ಡಾಯ. ಆದರೆ, ರಾಜಧಾನಿಯ ಬಹುತೇಕ ಮಳಿಗೆ, ಸರ್ಕಾರಿ ಕಚೇರಿಗಳು, ಮಾಲ್, ಹೋಟೆಲ್‌ಗಳ ನಾಮಫಲಕ ಕನ್ನಡದಲ್ಲಿ ಇರೋದೆ ಇಲ್ಲ. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಇವತ್ತು ಕನ್ನಡವಿರದ ಬೋರ್ಡ್‌ಗಳ ವಿರುದ್ಧ ಸಮರ ಸಾರಿದ್ದರು.
ಕನ್ನಡ ನಾಮಫಲಕ ಹಾಕಲು ನಿಮ್ಗೇನ್ರೀ ಕಷ್ಟ.. ಕ್ಯಾಪಿಟಲ್ ಹೋಟೆಲ್‌ಗೆ ವಾಟಾಳ್ ನೇತೃತ್ವದಲ್ಲಿ ಮುತ್ತಿಗೆ! - ಕ್ಯಾಪಿಟಲ್ ಹೋಟೆಲ್ ನಾಮಫಲಕ ಪುಡಿ ಪುಡಿ ನ್ಯೂಸ್
ಈ ವೇಳೆ ಪೊಲೀಸರು ಹಾಗೂ ವಾಟಾಳ್ ನಾಗರಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ರಸ್ತೆಯ ಮಧ್ಯದಲ್ಲಿಯೇ ವಾಟಾಳ್ ನಾಗರಾಜ್ ಮತ್ತವರ ಬೆಂಬಲಿಗರು ನಾಮಫಲಕ ಪುಡಿ ಪುಡಿ ಮಾಡಿ, ರಸ್ತೆಯಲ್ಲೇ ಕೂತು ಘೋಷಣೆ ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು.
ಇಂದು ವಾಟಾಳ್ ನಾಗರಾಜ್ ಮತ್ತವರ ತಂಡ ಸೇರಿ ರಾಜಭವನ ರಸ್ತೆಯ ಕ್ಯಾಪಿಟಲ್ ಹೋಟೆಲ್ ನಾಮಫಲಕವನ್ನ ಪುಡಿಗಟ್ಟಿದರು. ಹೋಟೆಲ್‌ಗೆ ಮುತ್ತಿಗೆ ಹಾಕಿದ ವಾಟಾಳ್ ಮತ್ತವರ ತಂಡ, ಈ ಹಿಂದೆ ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಮನವಿ ಮಾಡಿದ್ರೂ ಕೂಡ ಹಾಕಿಲ್ಲ. ನಾಮಫಲಕ ತೆಗೆದು ಬಂದ ನಂತರವೂ ಈಗ ಮತ್ತೆ ಹೊಸ ಆಂಗ್ಲ ಬಳಕೆಯ ನಾಮಫಲಕ ಅಳವಡಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.