ಬೆಂಗಳೂರು :ನಗರದಕ್ಯಾಪಿಟಲ್ ಹೋಟೆಲ್ನಲ್ಲಿನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದರೆ ಅದೇ ಹೋಟೆಲ್‌ನಲ್ಲಿ ಪೂರ್ವನಿಯೋಜಿತವಾಗಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅತಿಥಿಗಳು ರಾಜಕಾರಣಿಗಳು, ಪೊಲೀಸರು ಮತ್ತು ಮಾಧ್ಯಮದವರನ್ನು ನೋಡಿ ತಬ್ಬಿಬ್ಬಾದ ಸಂಗತಿ ನಡೆಯಿತು.
ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಹಲವು ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರು ಸಭೆಗೆ ಪಾಲ್ಗೊಳ್ಳಲು ನಿರಂತರವಾಗಿ ಆಗಮಿಸುತ್ತಿದ್ದರು. ರಾಜ್ಯ, ರಾಷ್ಟ್ರೀಯ ನಾಯಕರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 120ಕ್ಕೂ ಹೆಚ್ಚು ಮುಖಂಡರು ಹೋಟೆಲ್‌ಗೆ ಆಗಮಿಸುತ್ತಿದ್ದರು. ಆಗ ಹೊರ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಾಡಿದ್ದರೆ, ಒಳಭಾಗದಲ್ಲಿ ವಿಭಿನ್ನ ಸಮಸ್ಯೆ ಎದುರಾಯಿತು.