ಬೆಂಗಳೂರು:ಸಿಸಿಬಿ ಇನ್ಸ್ಪೆಕ್ಟರ್ ಅವರನ್ನು ಮನೆಗೆ ಬಿಟ್ಟು ಬರುವಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಜೀಪ್ ಚಾಲನೆ ಮಾಡುತ್ತಿದ್ದ ಪೊಲೀಸ್, ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ತಡರಾತ್ರಿ ನಡೆದಿದೆ.
ಪೊಲೀಸ್ ಜೀಪ್ಗೆ ಕ್ಯಾಂಟರ್ ಡಿಕ್ಕಿ: ಪೇದೆಗೆ ಗಂಭೀರ ಗಾಯ - yalahanka police station surrounding
ಸಿಸಿಬಿ ಇನ್ಸ್ಪೆಕ್ಟರ್ರನ್ನು ಮನೆಗೆ ಬಿಟ್ಟು ಬರುವಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಜೀಪ್ ಚಾಲನೆ ಮಾಡುತ್ತಿದ್ದ ಪೊಲೀಸ್ಗೆ ಗಂಭೀರ ಗಾಯಗಳಾಗಿರುವ ಘಟನೆ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ನಡೆದಿದೆ.
ಪೊಲೀಸ್ಗೆ ಗಂಭೀರ ಗಾಯ
ಕುಮಾರಸ್ವಾಮಿ ಎಂಬುವವರು ಗಾಯಗೊಂಡಿರುವವರು ಪೊಲೀಸ್ ಜೀಪ್ ಚಾಲಕ. ಅಪಘಾತದಿಂದ ಇವರ ಕಾಲಿನ ಮೂಳೆ ಮುರಿದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ಸ್ಪೆಕ್ಟರ್ ಕೇಶವ ಮೂರ್ತಿ ಅವರನ್ನ ಮನೆಗೆ ಡ್ರಾಪ್ ಮಾಡಿ ಹಿಂದಿರುಗುತ್ತಿದ್ದಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೊಲಾರೋ ಜೀಪ್ ನಜ್ಜುಗುಜ್ಜಾಗಿದ್ದು, ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.