ಬೆಂಗಳೂರು:ಮುಷ್ಕರ ಒಂಭತ್ತನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ವಿನೂತನ ಧರಣಿ ನಡೆಸಲು ಸಾರಿಗೆ ನೌಕರರು ತೀರ್ಮಾನಿಸಿದ್ದು, ಸರ್ಕಾರದ ವಿರುದ್ಧ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಮನೆಗಳಿಂದ ಹೊರಬಂದು ದೀಪ ಬೆಳಗಿಸುವ ಮೂಲಕ ತಮ್ಮ ಬದುಕನ್ನು ಕತ್ತಲಾಗಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಯಲಿದ್ದು, ಸಂಜೆ 6 ಗಂಟೆ ನಂತರ ರಾಜ್ಯಾದ್ಯಂತ ನೌಕರರು ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಿದ್ದಾರೆ.