ಬೆಂಗಳೂರು: ಕೊರೊನಾ ಭೀತಿಯಿಂದ ಲಾಕ್ಡೌನ್ ಜಾರಿ ಮಾಡಿದ ಬಳಿಕ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್ಗಳಿಗೆ ತಿಂಗಳಿಗೂ ಹೆಚ್ಚು ಕಾಲ ರಜೆ ನೀಡಿದ್ದರ ಪರಿಣಾಮ ಈ ವರ್ಷದ ಬೇಸಿಗೆ ರಜೆ ರದ್ದುಪಡಿಸಲಾಗಿದೆ.
ಲಾಕ್ಡೌನ್ ಜಾರಿ ಮಾಡಿದ ಬಳಿಕ ಹೈಕೋರ್ಟ್, ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಮಾರ್ಚ್ 24ರಿಂದ ಮೇ 3ರವರೆಗೆ ರಜೆ ಘೋಷಿಸಿದೆ. ಹೀಗಾಗಿ, ಏಪ್ರಿಲ್ 27ರಿಂದ ಮೇ. 24ರವರೆಗೆ ನಿಗದಿಯಾಗಿದ್ದ ಬೇಸಿಗೆ ರಜೆಯನ್ನು ರದ್ದು ಮಾಡಿ ಹೈಕೋರ್ಟ್ನ ಪೂರ್ಣ ಪೀಠ ನಿರ್ಣಯ ಕೈಗೊಂಡಿದೆ.