ಕರ್ನಾಟಕ

karnataka

ETV Bharat / city

ಈಶ್ವರಪ್ಪ ಆಸ್ತಿ ಲೆಕ್ಕ ಮಾಡಿ ಮುಟ್ಟುಗೋಲು ಹಾಕಿ : ಸಿ ಎಂ ಇಬ್ರಾಹಿಂ ಆಗ್ರಹ

ಬಜರಂಗದಳದ ಕಾರ್ಯಕರ್ತ ಸತ್ತರೆ 25 ಲಕ್ಷ ರೂ. ಪರಿಹಾರ ಕೊಡುತ್ತೀರಾ. ನಿಮ್ಮ ಮಂತ್ರಿಯಿಂದಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬಕ್ಕೆ ಏನೂ ಇಲ್ವಾ? ಎಂದು ಸಿ ಎಂ ಇಬ್ರಾಹಿಂ ಪ್ರಶ್ನಿಸಿದರು..

K. S. Eshwarappa property
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

By

Published : Apr 17, 2022, 5:14 PM IST

ಬೆಂಗಳೂರು :ಕೂಡಲೇ ಈಶ್ವರಪ್ಪ ಹಾಗೂ ಅವರ ಬಂಧು-ಬಳಗದವರು ಏನು ಆಸ್ತಿ ಮಾಡಿದ್ದಾರೋ ಅದನ್ನೆಲ್ಲಾ ಲೆಕ್ಕ ಹಾಕಿ. ಅದನ್ನು ‌ಮುಟ್ಟುಗೋಲು ಹಾಕಿ. ಆಗ ಬೇರೆ ಸಚಿವರು ಹುಷಾರಾಗ್ತಾರೆ ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಆಗ್ರಹಿಸಿದರು.

ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ಬಜರಂಗದಳದ ಕಾರ್ಯಕರ್ತ ಸತ್ತರೆ 25 ಲಕ್ಷ ರೂ. ಪರಿಹಾರ ಕೊಡುತ್ತೀರಾ. ನಿಮ್ಮ ಮಂತ್ರಿಯಿಂದಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬಕ್ಕೆ ಏನೂ ಇಲ್ವಾ? ಎಂದು ಕೇಳಿದರು.

ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ವಿರುದ್ಧ ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷ ವಾಗ್ದಾಳಿ ನಡೆಸಿರುವುದು..

ಮುಂದೆ ಕೋಮು ಸಂಘರ್ಷ ಸೃಷ್ಟಿಸುವ ಅನೇಕ ಪ್ರಕರಣಗಳು ನಡೆಯಲಿವೆ. ಜಗಳ ಮಾಡಬೇಕಂತಲೇ ಕೆಲವರು ಪೀಡಿಸುತ್ತಾರೆ. ಅಂಥ ಸಮಸ್ಯೆಗಳು ಬಂದಾಗ ನೀವು ಬೀದಿಗಿಳಿಯುವ ಅಗತ್ಯವಿಲ್ಲ. ಮುಸ್ಲಿಂ ನಾಯಕರ ಗಮನಕ್ಕೆ ತನ್ನಿ. ನೀವೆಲ್ಲರೂ ಸಮಾಧಾನವಾಗಿರಬೇಕು, ಶಾಂತಿಯಿಂದಿರಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಮುಸ್ಲಿಂ ಸಮುದಾಯದವರಿಗೆ ಇದೇ ವೇಳೆ ಮನವಿ ಮಾಡಿದರು.

ಇದನ್ನೂ ಓದಿ:ಜೆಡಿಎಸ್​ ಕೇವಲ ಒಂದು ಕುಟುಂಬ, ವರ್ಗದ ಪಕ್ಷವಲ್ಲ : ಮಿಷನ್ '123' ಅನುಷ್ಠಾನಕ್ಕೆ ಬರುತ್ತದೆ ಎಂದ ದೇವೇಗೌಡರು

ABOUT THE AUTHOR

...view details