ಕರ್ನಾಟಕ

karnataka

ETV Bharat / city

ಸಂಪುಟ ಸರ್ಕಸ್: ಗುರುವಾರ‌ ದೆಹಲಿಗೆ ಸಿಎಂ, 31ಕ್ಕೆ ನೂತನ ಸಚಿವರ ಪ್ರಮಾಣವಚನ? - ಜ. 30ರ ರಾತ್ರಿಯೇ ಸಿಎಂ ದೆಹಲಿಯಿಂದ ವಾಪಸ್ಸಾಗಲಿದ್ದು

ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ನಾಯಕರ ಜೊತೆ ಮಾತುಕತೆ ನಡೆಸಲು ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು ಶುಕ್ರವಾರವೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ.

KN_BNG_01_CM_DELHI_TOUR_SCRIPT_9021933
ಸಂಪುಟ ಸರ್ಕಸ್: ಗುರುವಾರ‌ ದೆಹಲಿಗೆ ತೆರಳಲಿರುವ ಸಿಎಂ!

By

Published : Jan 28, 2020, 11:07 AM IST

ಬೆಂಗಳೂರು:ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗುರುವಾರ ದೆಹಲಿಗೆ ತೆರಳುತ್ತಿದ್ದು, ಶುಕ್ರವಾರವೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ.

ಜನವರಿ 29 ರಂದು ಬೆಳಗಾವಿ ಹಾಗು ಶಿವಮೊಗ್ಗ ಪ್ರವಾಸಕ್ಕೆ ತೆರಳಲಿರುವ ಸಿಎಂ, 30ನೇ ತಾರೀಖಿನಂದು ದೆಹಲಿಗೆ ತೆರಳುತ್ತಿದ್ದಾರೆ. ಅಂದು ಬೆಳಗ್ಗೆ 11.30ರ ವಿಮಾನದಲ್ಲಿ ದೆಹಲಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರಲ್ಲಿ ಟಿಕೆಟ್ ಬುಕ್ ಆಗಿದೆ ಎನ್ನುವ ಮಾಹಿತಿ ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಬಿಜೆಪಿ‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಮಾತುಕತೆ ನಡೆಸಿದ್ದ ಸಿಎಂ, ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ‌. ಅಗತ್ಯವಿದ್ದರೆ ನಾನೂ ದೆಹಲಿಗೆ ಬರುವುದಾಗಿ ಹೇಳಿದ್ದರಂತೆ. ಅದರಂತೆ ಸಂತೋಷ್‌ ದೆಹಲಿಯಲ್ಲಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು, ಇದೀಗ ಸಿಎಂ ಕೂಡ ದೆಹಲಿಗೆ ತೆರಳುತ್ತಿದ್ದಾರೆ. ಈ ಮೂಲಕ ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜನವರಿ 30ರ ರಾತ್ರಿಯೇ ಸಿಎಂ ದೆಹಲಿಯಿಂದ ವಾಪಸ್ಸಾಗಲಿದ್ದು, ಮಾತುಕತೆ ಫಲಪ್ರದವಾದರೆ ಜ. 31 ರಂದೇ ನೂತನ ಸಚಿವರ ಪ್ರಮಾಣವಚನ ಸಮಾರಂಭವೂ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

For All Latest Updates

ABOUT THE AUTHOR

...view details