ಕರ್ನಾಟಕ

karnataka

ETV Bharat / city

ಸಿಎಎ  ವಿರೋಧಿಸಿ ಪ್ರತಿಭಟನೆ... ಕಂಟೋನ್ಮೆಂಟ್, ಶಿವಾಜಿನಗರ ಬಂದ್ - ಪೊಲೀಸರ ಸರ್ಪಗಾವಲು‌ - ಪೀಪಲ್‌ ಫೆಡರೇಶನ್ ವತಿಯಿಂದ ಸಿದ್ದತೆ

ಸಿಎಎ, ಎನ್ಆರ್ಸಿ ಕಿಚ್ಚು ಮತ್ತೆ ಸಿಲಿಕಾನ್ ಸಿಟಿಯಲ್ಲಿ ಭುಗಿಲೆದ್ದಿದ್ದು, ಕಾಯಿದೆ ವಿರೋಧಿಸಿ ಪ್ರತಿಭಟನೆ ಮತ್ತು ಬಂದ್ ನಡೆಸಲಾಗುತ್ತಿದೆ.

kn_bng_01_protest_video_7202707
ಸಿಎಎ ಕಾಯಿದೆ ವಿರೋಧಿಸಿ ಪ್ರತಿಭಟನೆ, ಕಂಟೋನ್ಮೆಂಟ್, ಶಿವಾಜಿನಗರ ಬಂದ್ - ಪೊಲೀಸರ ಸರ್ಪಗಾವಲು‌

By

Published : Jan 21, 2020, 12:45 PM IST

ಬೆಂಗಳೂರು:ಸಿಎಎ, ಎನ್ಆರ್ಸಿ ಕಿಚ್ಚು ಮತ್ತೆ ಸಿಲಿಕಾನ್ ಸಿಟಿಯಲ್ಲಿ ಭುಗಿಲೆದ್ದಿದ್ದು, ಕಾಯಿದೆ ವಿರೋಧಿಸಿ ಪ್ರತಿಭಟನೆ ಮತ್ತು ಬಂದ್ ನಡೆಸಲಾಗುತ್ತಿದೆ.

ಸಿಎಎ ಕಾಯಿದೆ ವಿರೋಧಿಸಿ ಪ್ರತಿಭಟನೆ, ಕಂಟೋನ್ಮೆಂಟ್, ಶಿವಾಜಿನಗರ ಬಂದ್ - ಪೊಲೀಸರ ಸರ್ಪಗಾವಲು‌

ಕಂಟೋನ್ಮೆಂಟ್, ಶಿವಾಜಿನಗರ ಬಂದ್ ಮಾಡಲಾಗಿದ್ದು, ‌ಅಂಗಡಿ ಮುಂಗಟ್ಟು, ಫುಟ್ ಪಾತ್ ವ್ಯಾಪಾರ, ಹೋಟೆಲ್, ರಸೆಲ್ ಮಾರುಕಟ್ಟೆ, ಬೀಫ್ ಮಾರ್ಕೆಟ್, ನಾಲಾ ವೆಜಿಟೇಬಲ್ ಮಾರ್ಕೆಟ್, ಗುಜರಿ ಮಾರ್ಕೆಟ್‌, ಬಂಡಿ ಮೋಟ್ ಮಾರ್ಕೆಟ್, ಸ್ಟಿಫನ್ ಸ್ಕೋರ್ ಮಾರ್ಕೆಟ್ ಹಾಗೂ ಸೆಂಟ್ರಲ್ ಸ್ಟ್ರೀಟ್ ಮಾರ್ಕೆಟ್ ಸೇರಿದಂತೆ ಇಡೀ ಕಂಟೋನ್ಮೆಂಟ್ ಸಂಪೂರ್ಣ ಬಂದ್‌ ಆಗಿದೆ.

ರಸೆಲ್ ಮಾರ್ಕೆಟ್ ಬಳಿ ಇರುವ ಚಾಂದಿನಿ ಚೌಕ್ ಸರ್ಕಲ್ ನಲ್ಲಿ ಬೃಹತ್ ವೇದಿಕೆಯನ್ನ ಜಾಯಿಂಟ್ ಆಕ್ಷನ್ ಕಮಿಟಿ ಹಾಗೂ ಪೀಪಲ್‌ ಫೆಡರೇಶನ್ ವತಿಯಿಂದ ಸಿದ್ದತೆ ಮಾಡಲಾಗಿದೆ. ಇನ್ನು ಮುಸ್ಲಿಮ್ ಸಮುದಾಯದ ಪ್ರಮುಖ ಮುಂಖಡರು ಬೃಹತ್ ವೇದಿಕೆಯಲ್ಲಿ ಎನ್ ಆರ್ ಸಿ ವಿರೋಧಿಸಿ ಧ್ವನಿ ಎತ್ತಿದ್ದಾರೆ. ಇನ್ನು ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರು ಭದ್ರತೆ ನೀಡಿದ್ದಾರೆ. ಮತ್ತೊಂದೆಡೆ ಶಾಂತಿಯುತ ಧರಣಿ ನಡೆಸಲು ಕೂಡ ಪೊಲೀಸರು ಸೂಚನೆ ನೀಡಿದ್ದಾರೆ.

ABOUT THE AUTHOR

...view details