ಕರ್ನಾಟಕ

karnataka

ETV Bharat / city

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೈ ಕತ್ತರಿಸಿದ ಪ್ರಕರಣ: ಮೂವರ ಬಂಧನ - 3arrested in byatarayanpura

ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಡ್ರ್ಯಾಗರ್​ನಿಂದ ಕೈ ಕಟ್ ಮಾಡಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ

bytarayana police hand cut case :3arrested
ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೈ ಕತ್ತರಿಸಿದ ಪ್ರಕರಣ: ಮೂವರ ಬಂಧನ

By

Published : Jul 4, 2021, 2:04 AM IST

Updated : Jul 4, 2021, 3:28 AM IST

ಬೆಂಗಳೂರು:ದ್ವಿಚಕ್ರ ವಾಹನ ಮಾರಾಟ ವಿಚಾರವಾಗಿ ಮೂವರು ಕಿಡಿಗೇಡಿಗಳು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಡ್ರ್ಯಾಗರ್​ನಿಂದ ಕೈ ಕಟ್ ಮಾಡಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬ್ಯಾಟರಾಯನಪುರ ನಿವಾಸಿಗಳಾದ ನವೀನ್ ಅಲಿಯಾಸ್ ಕರೀಯ(30), ವಿನೋದ್(24) ಮತ್ತು ಚಾಂದ್ ಪಾಷಾ(30) ಬಂಧಿರಾಗಿದ್ದಾರೆ. ಆರೋಪಿಗಳು ಜೂನ್ 30ರಂದು ಬ್ಯಾಟರಾಯನಪುರ ನಿವಾಸಿ ಚಂದನ್ ಸಿಂಗ್ (29) ಎಂಬವರ ಮೇಲೆ ಹಲ್ಲೆ ನಡೆಸಿದ್ದರು.

ಆರೋಪಿಗಳು ಚಂದನ್ ಸಿಂಗ್, ಮಹೇಂದ್ರ ಎನ್ನುವವರ ಜೊತೆ ಸೇರಿಕೊಂಡು ಬ್ಯಾಟರಾಯನಪುರದಲ್ಲಿ ವಿನಾಯಕ ಮೋಟರ್ಸ್ ಎಂಬ ಸೆಕೆಂಡ್ ಹ್ಯಾಂಡಲ್ ದ್ವಿಚಕ್ರ ವಾಹನಗಳ ಮಾರಾಟ ವ್ಯಾಪಾರ ನಡೆಸುತ್ತಿದ್ದರು.

ಆರೋಪಿ ವಿನೋದ್ ಕೆಲ ತಿಂಗಳ ಹಿಂದೆ 20 ಸಾವಿರ ರೂ. ಮುಂಗಡ ಕೊಟ್ಟು ಡಿಯೋ ಬೈಕ್ ಕೊಡುವಂತೆ ಹೇಳಿದ್ದನು. ಆದರೆ, ಲಾಕ್‌ಡೌನ್‌ನಿಂದ ಅಂಗಡಿ ತೆಗೆದಿರಿಲ್ಲ. ಜೂನ್ 30ರ ರಾತ್ರಿ ಅಂಗಡಿ ಬಳಿ ಬಂದ ಆರೋಪಿಗಳು ಕೂಡಲೇ ಬೈಕ್ ಕೊಡುವಂತೆ ಒತ್ತಾಯಿಸಿದ್ದರು. ಆದರೆ, ಚಂದನ್ ಸಿಂಗ್, ಒಂದೆರಡು ದಿನ ಕಾಲವಕಾಶ ಕೋರಿದ್ದರು. ಅದರಿಂದ ಆಕ್ರೋಶಗೊಂಡು ಆರೋಪಿಗಳು ಮಾರಕಾಸ್ತ್ರಗಳಿಂದ ಚಂದನ್ ಸಿಂಗ್ ಕೈ, ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಜಮನ್​ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ:ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್

Last Updated : Jul 4, 2021, 3:28 AM IST

ABOUT THE AUTHOR

...view details