ಕರ್ನಾಟಕ

karnataka

ETV Bharat / city

ಕೆ.ಆರ್.ಪುರದಲ್ಲಿ 50 ಲಕ್ಷ ವೆಚ್ಚದಲ್ಲಿ ಕಂಚಿನ ಕೆಂಪೇಗೌಡ ಪ್ರತಿಮೆ ನಿರ್ಮಾಣ : ಬೈರತಿ ಬಸವರಾಜ್ - ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ

ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವನ್ನು ಕೆ.ಆರ್.ಪುರ, ವಿಜಿನಾಪುರ ಹಾಗೂ ಹೊರಮಾವು ಅಗರದಲ್ಲಿ ಅದ್ಧೂರಿಯಾಗಿ ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘದ ವತಿಯಿಂದ ಆಚರಿಸಲಾಯಿತು. ಸಚಿವ ಬೈರತಿ ಬಸವರಾಜ್ ಸಮಾಜದ ಮುಖಂಡರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾದರು..

ಬೈರತಿ ಬಸವರಾಜ್
ಬೈರತಿ ಬಸವರಾಜ್

By

Published : Jun 27, 2022, 9:53 PM IST

Updated : Jun 27, 2022, 10:57 PM IST

ಬೆಂಗಳೂರು :ಕೋವಿಡ್ ಕಾರಣ ಎರಡು ವರ್ಷಗಳಿಂದ ಸರಳವಾಗಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವನ್ನು ಆಚರಿಸಲಾಗಿತ್ತು. ಈ ಬಾರಿ ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘದ ವತಿಯಿಂದ ಕೆ.ಆರ್.ಪುರ, ವಿಜಿನಾಪುರ ಹಾಗೂ ಹೊರಮಾವು ಅಗರದಲ್ಲಿ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಕೆಂಪೇಗೌಡ ಜಯಂತಿಯನ್ನು ಸಚಿವ ಬೈರತಿ ಬಸವರಾಜ್ ಸಮಾಜದ ಮುಖಂಡರೊಂದಿಗೆ ಆಚರಣೆ ಮಾಡಿದರು.

ನಂತರ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು, ಕೆ.ಆರ್.ಪುರದ ವಿನಾಯಕ ದೇವಸ್ಥಾನ ವೃತ್ತದಲ್ಲಿ ಐವತ್ತು ಲಕ್ಷ ವೆಚ್ಚದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ ಮುಂದಿನ ವರ್ಷ ಇನ್ನೂ ಸಂಭ್ರಮದಿಂದ ಆಚರಿಸಲಾಗುತ್ತದೆ.

ಕೆ.ಆರ್.ಪುರದಲ್ಲಿ 50 ಲಕ್ಷ ವೆಚ್ಚದಲ್ಲಿ ಕಂಚಿನ ಕೆಂಪೇಗೌಡ ಪ್ರತಿಮೆ ನಿರ್ಮಾಣ

ಅದೇ ರೀತಿ ಕ್ಷೇತ್ರದ ಒಕ್ಕಲಿಗ ಸಮಾಜದ ಕೋರಿಕೆ ಮೇರೆಗೆ ಹೊರಮಾವು ಅಗರ ಕೆರೆಯ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ, ಕಲ್ಕೆರೆಯಲ್ಲಿ ನಾಡಪ್ರಭು ಹೆಬ್ಬಾಗಿಲು ನಿರ್ಮಾಣ ಮಾಡಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್, ಜಯಪ್ರಕಾಶ್, ಮುಖಂಡರಾದ ಮುನೇಗೌಡ, ವಿಜಿನಾಪುರ ಪ್ರದೀಪ್ ಗೌಡ, ರಮೇಶ್ ಗೌಡ, ಅಗರ ಬಚ್ಚೇಗೌಡ, ಕಲ್ಕೆರೆ ಗಂಗಾಧರ, ಸುನೀಲ್ ಗೌಡ, ನಗರೇಶ್ವರ ನಾಗೇನಹಳ್ಳಿ ಲೋಕೇಶ್​ ಉಪಸ್ಥಿತರಿದ್ದರು.

ಇದನ್ನೂ ಓದಿ:ಎರಡು ದೊಡ್ಡ ಸಮುದಾಯವನ್ನು ಒಡೆಯುವ ಕೆಲಸ ಮಾಡ್ಲಾಗುತ್ತಿದೆ : ಶ್ರೀ ನಂಜಾವಧೂತ ಸ್ವಾಮೀಜಿ ಬೇಸರ

Last Updated : Jun 27, 2022, 10:57 PM IST

ABOUT THE AUTHOR

...view details