ಕರ್ನಾಟಕ

karnataka

ಉಪಚುನಾವಣೆ ಕಾವಿನ ಮಧ್ಯೆ 88 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳ ಒಟ್ಟು 88 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.

By

Published : Nov 28, 2019, 5:02 PM IST

Published : Nov 28, 2019, 5:02 PM IST

88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ  ಆದೇಶ
88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳ ಒಟ್ಟು 88 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.

88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ ಆದೇಶ

ಚುನಾವಣಾ ಆಯೋಗದ ನಿಯಮದ ಪ್ರಕಾರ, ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಇನ್ಸ್​ಪೆಕ್ಟರ್​ಗಳು ಚುನಾವಣೆ ನಡೆಯುವ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವಂತಿಲ್ಲ. ಹೀಗಾಗಿ ಈ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಿದ್ದೇಶ್ವರ-ಬಳ್ಳಾರಿಯಿಂದ ಕೊಪ್ಪಳ ಜಿಲ್ಲೆ
ನಾರಾಯಣ-ಹೊಸಪೇಟೆ ಟೌನ್ ಸರ್ಕಲ್​ನಿಂದ ರಾಯಚೂರಿಗೆ
ಪರಸಪ್ಪ- ಹೊಸಪೇಟೆ ಗ್ರಾಮೀಣ ಠಾಣೆಯಿಂದ ರಾಯಚೂರು
ಸಂಜೀವ್ ಕುಮಾರ್ - ರಾಯಚೂರಿನಿಂದ ಹೊಸಪೇಟೆ ಟೌನ್
ವೆಂಕಟೇಶ್​- ಬೆಳಗಾವಿಯಿಂದ ಖಾನಾಪುರ
ನಾಗರಾಜು- ಕಮರ್ಷಿಯಲ್ ಸ್ಟ್ರೀಟ್ ಸಿಐಡಿ
ಲೋಹಿತ್- ನಂದಿನಿ ಲೇಔಟ್ ಸಿಐಡಿ
ಸಂಜೀವ್ ರಾಯಪ್ಪ-ರಾಮಮೂರ್ತಿನಗರದಿಂದ ಸಿಐಡಿ
ಸೋಮಶೇಖರ್ - ಬಸವೇಶ್ವರ ನಗರದಿಂದ ಸಿಐಡಿ
ಮಹೇಂದ್ರ ಕುಮಾರ್- ಆರ್‌ಎಂಸಿ ಯಾರ್ಡ್​ನಿಂದ ಸಿಐಡಿ
ರಾಮಪ್ಪ- ತಲಘಟ್ಟಪುರದಿಂದ ಸಿಐಡಿಗೆ ವರ್ಗಾವಣೆ
ಗೋವಿಂದ ರಾಜು-ಸಿಐಡಿ ‌ಯಿಂದ ಕಮರ್ಷಿಯಲ್ ಠಾಣೆಗೆ
ಪ್ರಶಾಂತ್- ಸಿಐಡಿಯಿಂದ ನಂದಿನಿ ಲೇಔಟ್ ‌ಸೇರಿದಂತೆ ಸುಮಾರು ‌88 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಯಾಕೆ ಈ ವರ್ಗಾವಣೆ?

ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಇನ್ಸ್​ಪೆಕ್ಟರ್​ ಪಕ್ಷದ ಪರವಾಗಿ‌ ಕೆಲಸಗಳನ್ನ ನಿರ್ವಹಿಸಬಾರದು. ಹಾಗೆಯೇ ‌ಕೆಲವೊಂದು ಪಕ್ಷಕ್ಕೆ ಮತ‌ ಹಾಕುವಂತೆ ಒತ್ತಡ ಹೇರುವ ಸಾಧ್ಯತೆ ಇರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ABOUT THE AUTHOR

...view details