ಬೆಂಗಳೂರು:ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದೆ. ಹೀಗಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ 13 ಕ್ಷೇತ್ರಗಳಿಗೆ ಉಸ್ತುವಾರಿ, ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಉಪಸಮರಕ್ಕೆ ತೆನೆಹೊತ್ತ ಮಹಿಳೆ ಸರ್ವ ಸನ್ನದ್ಧ: 13 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಿದ ಜೆಡಿಎಸ್ - bangaluru news
ಮಾಜಿ ಪ್ರಧಾನಿ,ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ 13 ಕ್ಷೇತ್ರಗಳಿಗೆ ಉಸ್ತುವಾರಿ,ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಹುಣಸೂರು ಕ್ಷೇತ್ರ:ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಕೆ.ಮಹಾದೇವ್,ಅಶ್ವಿನ್ ಕುಮಾರ್, ಸಂಸದ ಪ್ರಜ್ವಲ್ ರೇವಣ್ಣ.
ಕೆ.ಆರ್.ಪೇಟೆ :ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಹೆಚ್.ಡಿ.ರೇವಣ್ಣ, ಬಿ.ಬಿ.ನಿಂಗಯ್ಯ,ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ.
ಮಹಾಲಕ್ಷ್ಮಿಲೇಔಟ್:ನಗರ ಅಧ್ಯಕ್ಷ ಆರ್.ಪ್ರಕಾಶ್, ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ, ಡಿ.ನಾಗರಾಜಯ್ಯ, ವಿ.ನಾರಾಯಣಸ್ವಾಮಿ.
ಯಶವಂತಪುರ:ಶಾಸಕ ಆರ್.ಮಂಜುನಾಥ್, ಎಂಎಲ್ಸಿ ಎನ್.ಅಪ್ಪಾಜಿಗೌಡ,ಶಾಸಕ ಬಿ.ಸತ್ಯನಾರಾಯಣ,ಮಾಜಿ ಎಂಎಲ್ಸಿ ಈ.ಕೃಷ್ಣಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ.
ಚಿಕ್ಕಬಳ್ಳಾಪುರ: ವಿಧಾನಸಭೆ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ,ಶಾಸಕ ಎಲ್.ಎನ್.ನಾರಾಯಣಸ್ವಾಮಿ,ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ,ಎಂಎಲ್ಸಿ ಆರ್.ಚೌಡರೆಡ್ಡಿ ತೂಪಲ್ಲಿ.
ಶಿವಾಜಿನಗರ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಜಫ್ರುಲ್ಲಾಖಾನ್, ಎಂಎಲ್ಸಿ ಡಾ.ಟಿ.ಎ.ಶರವಣ, ರಾಜ್ಯ ಹಿರಿಯ ಉಪಾಧ್ಯಕ್ಷ ಸಯ್ಯದ್ ಶಫೀವುಲ್ಲಾ ಸಾಹೇಬ್.
ಯಲ್ಲಾಪುರ: ವಿಧಾನಪರಿಷತ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ,ಎಂಎಲ್ಸಿ ಮರಿತಿಬ್ಬೇಗೌಡ, ಮಾಜಿ ಶಾಸಕ ಆನಂದ್ ಆಸ್ನೋಟಿಕರ್, ಹಿರಿಯ ಮುಖಂಡ ಗಣಪಯ್ಯ ಎಂ.ಗೌಡ, ರಾಜ್ಯ ಉಪಾಧ್ಯಕ್ಷ ಎಂ.ಗಂಗಣ್ಣ.
ಕೆ.ಆರ್.ಪುರ :ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ,ಎಂಎಲ್ಸಿ ರಮೇಶ್ ಗೌಡ,ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ವಿ.ಅಮರನಾಥ್.
ವಿಜಯನಗರ:ಶಾಸಕ ರಾಜಾ ವೆಂಕಟಪ್ಪ ನಾಯಕ್ ದೊರೆ, ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ, ರಾಜ್ಯ ಯುವ ಜನತಾದಳ ಕಾರ್ಯಾಧ್ಯಕ್ಷ ಶರಣಗೌಡ ಕಂದಕೂರು.
ಕಾಂಗವಾಡ, ಅಥಣಿ ಹಾಗೂ ಗೋಕಾಕ್ ಕ್ಷೇತ್ರಗಳಿಗೆ : ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್ ನಾಡಗೌಡ, ಎಂ.ಸಿ.ಮನಗೂಳಿ, ಎಂಎಲ್ಸಿ ಬಸವರಾಜ ಹೊರಟ್ಟಿ, ಮಾಜಿ ಎಂಎಲ್ಸಿ ಹೆಚ್.ಸಿ.ನೀರಾವರಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್,ಶಾಸಕ ದೇವಾನಂದ್ ಚೌವ್ಹಾಣ್,ನಾಗನಗೌಡ ಕಂದಕೂರು.
ರಾಣೆಬೆನ್ನೂರು:ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ, ಎಂಎಲ್ಸಿ ಕೆ.ಎ.ತಿಪ್ಪೇಸ್ವಾಮಿ, ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ್, ಮುಖಂಡ ಹನುಮಂತಪ್ಪ ಮಾವಿನಮರದ.