ಕರ್ನಾಟಕ

karnataka

ETV Bharat / city

ಉಪಸಮರಕ್ಕೆ ಮುಹೂರ್ತ ಫಿಕ್ಸ್‌: ಇಲ್ಲಿದೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ - ಮುಖ್ಯ ಚುನಾವಣಾಧಿಕಾರಿ

ಕೊನೆಗೂ 12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕವನ್ನು ಇಂದು ಬೆಂಗಳೂರಿನ‌‌ ಮುಖ್ಯ ಚುನಾವಣಾಧಿಕಾರಿ‌ ಕಚೇರಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರಕಟಿಸಿದ್ರು.

ಉಪಚುನಾವಣೆ ದಿನಾಂಕ ಘೋಷಣೆ ಮಾಡಿದ ಸಂಜೀವ್ ಕುಮಾರ್

By

Published : Sep 21, 2019, 5:26 PM IST

ಬೆಂಗಳೂರು: 12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ‌ ಸಂಜೀವ್ ಕುಮಾರ್ ತಿಳಿಸಿದರು.

ಉಪಚುನಾವಣೆ ದಿನಾಂಕ ಘೋಷಣೆ ಮಾಡಿದ ಸಂಜೀವ್ ಕುಮಾರ್

-ಸೆಪ್ಟೆಂಬರ್ 30- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

-ಅಕ್ಟೋಬರ್ 3- ನಾಮಪತ್ರ ಹಿಂಪಡೆಯಲು ಕೊನೆಯ ದಿನ.

-ಅಕ್ಟೋಬರ್ 21ರಂದು ಚುನಾವಣೆ

- 24 ಕ್ಕೆ ಮತ ಎಣಿಕೆ

- 27 ಅಕ್ಟೋಬರ್‌ ಪ್ರಕ್ರಿಯೆ ಅಂತ್ಯ

- ಒಟ್ಟು ಮತದಾರರು 37,49,047

- ಪುರುಷ ಮತದಾರರು- 19,12,084

-ಮಹಿಳಾ ಮತದಾರರು- 18,36,566

- ಮೊದಲ ಬಾರಿ ಮತ ಹಾಕುವವರು- 70,619

- ಮತಗಟ್ಟೆಗಳ ಸಂಖ್ಯೆ 4,185

- ಚುನಾವಣಾ ಸಿಬ್ಬಂದಿ- 15,782

ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದೇನು?

ಚುನಾವಣಾ ಕೆಲಸದ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಈಗಾಗಲೇ ಚುನಾವಣೆಗೆ ಅಗತ್ಯವಾದ ವಿವಿಪ್ಯಾಟ್​ ಮತ್ತು ಮತಯಂತ್ರಗಳನ್ನು ಹೊಂದಿಸಿಕೊಳ್ಳಲಾಗಿದ್ದು, ನೆರೆಯ ರಾಜ್ಯಗಳಿಂದಲೂ ತರಿಸಿದ್ದೇವೆ. ಮತಪಟ್ಟಿಯಲ್ಲಿ ಹೆಸರಿರದ ಮತದಾರರು ಕೂಡಲೇ ಹೆಸರು ಸೇರಿಸಬೇಕು. ಮಂಗಳವಾರದ ನಂತರ ನಾವೂ ಈ ವಿಚಾರದಲ್ಲಿ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.‌

'ಅನರ್ಹ ಶಾಸಕರು ಸ್ಪರ್ಧೆ ಮಾಡಲು ಅವಕಾಶವಿಲ್ಲ'

ಚುನಾವಣಾ ತಕರಾರು ಅರ್ಜಿಗಳು ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆ ಮಸ್ಕಿ, ಆರ್ ಆರ್ ನಗರ ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ ಎಂದು ಸಂಜೀವ್ ಕುಮಾರ್ ತಿಳಿಸಿದರು. ಈ ವಿಚಾರ ಕೋರ್ಟ್‌ನಲ್ಲಿ ನಿರ್ಧಾರವಾಗುವವರೆಗೆ ಚುನಾವಣೆ ನಡೆಯಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡಲು ಅವಕಾಶವಿಲ್ಲ. ಸ್ಪೀಕರ್ ಆದೇಶ ಈ ಚುನಾವಣೆಗೂ ಅನ್ವಯವಾಗುವ ಹಿನ್ನೆಲೆ ಈ ಚುನಾವಣೆಯಲ್ಲಿ ಅನರ್ಹರಿಗೆ ಅವಕಾಶವಿಲ್ಲ ಅಂತ‌ ಮಾಹಿತಿ ನೀಡಿದರು.

ಮೈಸೂರು ದಸರಾ ಆಚರಣೆಗೆ ವಿಶೇಷ ಅನುಮತಿ;

ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಉಪ ಚುನಾವಣೆ ಅಡ್ಡಿಯಾಗಲಿದೆಯಾ? ಎಂಬ‌ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ದಸರಾಗೆ ವಿಶೇಷ ಅನುಮತಿ ಪಡೆಯುತ್ತಾರೆ. ಅನೇಕ ಬಾರಿ ಹೀಗಾಗಿದೆ. ದಸರಾ ಆಚರಣೆಯ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳಿಗೆ ಕೆಲವು ವಿಚಾರಗಳಲ್ಲಿ ಮಾತ್ರ ನಿರ್ಬಂಧ ಇರಲಿದೆ ಎಂದರು. ಇದೇ ವೇಳೆ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಹಿನ್ನೆಲೆ ಹಲವರು ಪರಿಹಾರಕ್ಕೆ ಮುಂದಾಗುತ್ತಿದ್ದು, ಇದಕ್ಕೂ ಕೂಡ ಯಾವುದೇ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದರು.

ಉಪಚುನಾವಣೆ ನಡೆಯುವ 15 ಕ್ಷೇತ್ರಗಳಾವುವು?

1)ಅಥಣಿ
2)ಕಾಗವಾಡ
3)ಗೋಕಾಕ್
4)ಯಲ್ಲಾಪುರ
5)ಹಿರೆಕೆರೂರ್
6)ರಾಣೆಬೆನ್ನೂರು
7)ವಿಜಯನಗರ
8)ಚಿಕ್ಕಬಳ್ಳಾಪುರ
9)ಕೆ.ಆರ್ ಪುರ
10)ಯಶವಂತಪುರ
11)ಮಹಾಲಕ್ಷ್ಮಿ ಲೇಔಟ್
12)ಶಿವಾಜಿನಗರ
13)ಹೊಸಕೋಟೆ
14)ಕೆ.ಆರ್ ಪೇಟೆ
15)ಹುಣಸೂರು.

ABOUT THE AUTHOR

...view details