ಕರ್ನಾಟಕ

karnataka

BWSSB ಮಹಾ ಎಡವಟ್ಟು: ಬೀಳುವ ಹಂತದಲ್ಲಿದೆ ನಾಲ್ಕು ಅಂತಸ್ತಿನ ಮನೆ

By

Published : Jul 13, 2021, 10:43 PM IST

ರಾಜಾಜಿನಗರದ 6ನೇ ಬ್ಲಾಕ್​​ನಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಚರಂಡಿಗೆ ಆಳ ತೋಡುವಾಗ ಗೋವಿಂದನ್​ ಎಂಬುವವರಿಗೆ ಸೇರಿದ 4 ಅಂತಸ್ಥಿನ ಮನೆಯ ಪಾಯ ಬಿರುಕು ಬಿಟ್ಟಿದೆ.

bwssb-unscientific-work-made-public-fear
ಬಿಡ್ಯೂಎಸ್​ಎಸ್​ಬಿ ಎಡವಟ್ಟು

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಎಡವಟ್ಟು ಮಾಡಿದ್ರೆ ಅದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಕೆಲವೊಂದು ಬಾರಿ ಪ್ರಾಣಾಪಾಯ ಕೂಡ‌ ಉಂಟು ಮಾಡುತ್ತದೆ. ಈ ಹಿಂದೆ ಸಾರಿಗೆ ಅಧಿಕಾರಿಗಳು ವಿನಾ ಕಾರಣ ನೌಕರನನ್ನು ವಜಾಗೊಳಿಸಿ ಎಡವಟ್ಟು ಮಾಡಿದ್ದರು. ಇದೀಗ ಬಿಡ್ಯೂಎಸ್​ಎಸ್​ಬಿ (BWSSB) ಅಧಿಕಾರಿಗಳ ಮಹಾ ಎಡವಟ್ಟು 4 ಅಂತಸ್ತಿನ ಮನೆ ನೆಲಕ್ಕುರುಳಲು ಕಾರಣವಾಗಿದೆ.

BWSSB ಮಹಾ ಎಡವಟ್ಟು: ಬಿಳುವ ಹಂತದಲ್ಲಿ ನಾಲ್ಕು ಅಂತಸ್ತಿನ ಮನೆ

ರಾಜಾಜಿನಗರದ 6ನೇ ಬ್ಲಾಕ್​​ನಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಚರಂಡಿಗೆ ಆಳ ತೋಡುವಾಗ ಗೋವಿಂದನ್​ ಎಂಬುವವರಿಗೆ ಸೇರಿದ ನಾಲ್ಕು ಅಂತಸ್ಥಿನ ಮನೆಯ ಪಾಯ ಬಿರುಕು ಬಿಟ್ಟಿದೆ. ಅವೈಜ್ಞಾನಿಕವಾಗಿ ಜೆಸಿಪಿ ಇಂದ ಕಾಮಗಾರಿ ಮಾಡಿರೋದೆ ಇದಕ್ಕೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಕಳೆದ ಎರಡು ದಿನದಿಂದ ಅಕ್ಕ ಪಕ್ಕದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

ಸದ್ಯ ಗೊಂವಿಂದನ್ ಅವರ ಕುಟುಂಬದ ಜೊತೆಗೆ ನೆರೆಮನೆ ನಿವಾಸಿಗಳು ಆಂತಕಕ್ಕೆ ಒಳಗಾಗಿದ್ದು, ಮನೆ ಯಾವಗ ಏನಾಗುತ್ತೊ ಎಂಬ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇಷ್ಟಾದರೂ ಸಹ ಮುನ್ನೆಚ್ಚರಿಗೆ ಕ್ರಮಕ್ಕೆ ಬಿಡ್ಯೂಎಸ್​ಎಸ್​ಬಿ ಅಧಿಕಾರಿಗಳು ಮುಂದಾಗಿಲ್ಲ ಎಂಬುವುದೇ ವಿಪರ್ಯಾಸ.

ABOUT THE AUTHOR

...view details