ಬೆಂಗಳೂರು: ಕೊರೊನಾ ನಿಯಂತ್ರಿಸಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಸಹ ಲಾಕ್ಡೌನ್ಗೆ ಕೆಲವೆಡೆ ಜನ ನಿರ್ಲಕ್ಷ್ಯ ವಹಿಸಿ ಗುಂಪು ಗುಂಪಾಗಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದಿದ್ದಾರೆ.
ಲಾಕ್ಡೌನ್ಗೆ ಡೋಂಟ್ ಕೇರ್: ಶಿವಾಜಿನಗರ ಮಾರುಕಟ್ಟೆಯಲ್ಲಿ ಮತ್ತದೇ ಜನಸಂದಣಿ! - Shivajinagar Market news
ಶಿವಾಜಿನಗರ ಮಾರುಕಟ್ಟೆ, ರಸೆಲ್ ಮಾರುಕಟ್ಟೆ ಸುತ್ತ ಜನದಟ್ಟಣೆ ಹೆಚ್ಚಾಗುತ್ತಿದ್ದು, ಲಾಕ್ಡೌನ್ ಆದೇಶವನ್ನು ಗಾಳಿಗೆ ತೂರಲಾಗಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಸಹ ಲಾಕ್ಡೌನ್ಗೆ ಜನ ಸರಿಯಾಗಿ ಸ್ಪಂದಿಸುತ್ತಿಲ್ಲ.
ತರಕಾರಿ ಖದೀರಿಗೆ ಮುಗಿಬಿದ್ದ ಜನ
ಶಿವಾಜಿನಗರ ಮಾರುಕಟ್ಟೆ, ರಸೆಲ್ ಮಾರುಕಟ್ಟೆ ಸುತ್ತ ಜನದಟ್ಟಣೆ ಹೆಚ್ಚಾಗುತ್ತಿದೆ. ಜನರು ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿ ತರಕಾರಿ ಕೊಳ್ಳುತ್ತಿದ್ದಾರೆ. ಮಾಸ್ಕ್ ಕೂಡ ಧರಿಸದೆ ಓಡಾಡುತ್ತಿದ್ದಾರೆ. ಶಿವಾಜಿ ನಗರದ ಮಾರ್ಷಲ್ಸ್, ಪೊಲೀಸ್ ಸಿಬ್ಬಂದಿ ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಕೂಡ ಜನರು ಮನೆಯಿಂದ ಆಚೆ ಬರುತ್ತಿದ್ದಾರೆ.