ಬೆಂಗಳೂರು: ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂಗೊಂಡ ಘಟನೆ ನಗರದ ಹೊರವಲಯದ ಕನಕಪುರ ಮುಖ್ಯ ರಸ್ತೆಯ ಅಗರ ಕ್ರಾಸ್ ಬಳಿ ತಡರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ರಸ್ತೆಗೆ ಆನೆ ಅಡ್ಡ ಬಂದಿದ್ದು, ಬಸ್ನ ಮುಂಭಾಗ ಜಖಂಗೊಂಡಿದೆ.
ಬಿಎಂಟಿಸಿ ಬಸ್ಗೆ ಗುದ್ದಿದ ಕಾಡಾನೆ.. ಬಸ್ ಮುಂಭಾಗ ನಜ್ಜುಗುಜ್ಜು - ಬೆಂಗಳೂರಿನ ಆಗರ ಕ್ರಾಸ್ ಬಳಿ ಕಾಡಾನೆಗೆ ಬಸ್ ಡಿಕ್ಕಿ:
ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯ ಅಗರ ಕ್ರಾಸ್ ಬಳಿ ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಆನೆ ಗುದ್ದಿದ ರಭಸಕ್ಕೆ ಬಸ್ನ ಮುಂಭಾಗ ಜಖಂಗೊಂಡಿದೆ.
ಬಸ್ ಅಪಘಾತ
ಬಸ್ನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಚಾಲಕ ನಾಗೇಂದ್ರ ಕಾಲಿಗೆ ಗಾಯಗಳಾಗಿದ್ದು, ಅಪಘಾತ ಸ್ಥಳದಿಂದ ಆನೆ ಚೇತರಿಸಿಕೊಂಡು ವಾಪಸ್ ಆಗಿದೆ.
ಇದನ್ನೂ ಓದಿ:ಆಸ್ಟರ್ ಆಸ್ಪತ್ರೆಯಿಂದ ರಾಮಯ್ಯ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ರವಾನೆ