ಬೆಂಗಳೂರು: ಸಂಬಂಧಿಕರ ಮನೆಗೆ ಮದುವೆ ಆಂಮತ್ರಣ ಪತ್ರಿಕೆ ನೀಡಿ, ಮನೆಗೆ ಹಿಂದಿರುಗುವಾಗ ಸ್ಕೂಲ್ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ಎದುರು ನಡೆದಿದೆ.
ಮದುವೆ ಆಮಂತ್ರಣ ನೀಡಿ ಹಿಂದಿರುಗುತ್ತಿದ್ದ ವ್ಯಕ್ತಿಗೆ ಸ್ಕೂಲ್ ಬಸ್ ಡಿಕ್ಕಿ..ಸ್ಥಳದಲ್ಲೇ ಸಾವು - ಯಶವಂತಪುರ ಸಂಚಾರಿ ಪೊಲೀಸರು
ಸಂಬಂಧಿಕರ ಮನೆಗೆ ಮದುವೆ ಆಂಮತ್ರಣ ಪತ್ರಿಕೆ ನೀಡಿ, ಮನೆಗೆ ಹಿಂದಿರುಗುವಾಗ ಸ್ಕೂಲ್ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ಎದುರು ನಡೆದಿದೆ.

ಚಿಕ್ಕೋಡಿಯಪ್ಪ (78) ಮೃತ ವ್ಯಕ್ತಿ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿವೇಣಿ ರಸ್ತೆ ಬಳಿ ಚಿಕ್ಕೋಡಿಯಪ್ಪ ಕುಟುಂಬಸ್ಥರ ಜೊತೆ ವಾಸವಿದ್ದರು. ನವೆಂಬರ್ ತಿಂಗಳು ಮಗನ ಮದುವೆ ಇರುವ ಕಾರಣ ಎಲ್ಲ ಕುಟುಂಬಸ್ಥರಿಗೆ ಮದುವೆ ಪತ್ರಿಕೆ ಹಂಚಿಕೆ ಮಾಡ್ತಿದ್ರು. ನಿನ್ನೆ ಸಂಜೆ ಕೂಡ ಆಮಂತ್ರಣ ಪತ್ರಿಕೆ ನೀಡಲು ಯಶವಂತಪುರ ಬಳಿ ಇರುವ ಕುಟುಂಬಸ್ಥರ ಮನೆಗೆ ತೆರಳಿ ರಾತ್ರಿ ಅಲ್ಲೆ ಕಳೆದಿದ್ರು. ಮುಂಜಾನೆ ಎದ್ದು ತನ್ನ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದ್ದು, ಚಿಕ್ಕೋಡಿಯಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಸ್ ಚಾಲಕ ರಘುವನ್ನ ಯಶವಂತಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.