ಬೆಂಗಳೂರು: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಭವನದ ಬಳಿ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಜೆಸಿಬಿ ಎದುರು ಭಾಗದಲ್ಲಿ ಬೈಕ್, ಸಿಲಿಂಡರ್ ಇಡುವ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬೆಲೆ ಏರಿಕೆ ಖಂಡಿಸಿ ನಲಪಾಡ್ ನೇತೃತ್ವದಲ್ಲಿ 'ಬುಲ್ಡೋಜರ್ ಪ್ರತಿಭಟನೆ' - ಯುವ ಕಾಂಗ್ರೆಸ್ ಬುಲ್ಡೋಜರ್ ಪ್ರತಿಭಟನೆ
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಬುಲ್ಡೋಜರ್ ಪ್ರತಿಭಟನೆ ನಡೆಸಿತು.
ಯೂತ್ ಕಾಂಗ್ರೆಸ್ ಬುಲ್ಡೋಜರ್ ಪ್ರತಿಭಟನೆ
ಕಾಂಗ್ರೆಸ್ ಭವನದಿಂದ ಮೌರ್ಯ ವೃತ್ತದವರೆಗೂ ಮೆರವಣಿಗೆ ತೆರಳಲು ಕಾರ್ಯಕರ್ತರು ಮುಂದಾದರು. ಈ ವೇಳೆ ಪೊಲೀಸರು ಕಾಂಗ್ರೆಸ್ ಭವನದ ಗೇಟ್ ಹಾಕಿ ಅವರನ್ನು ತಡೆದರು. ಮೊಹಮ್ಮದ್ ನಲಪಾಡ್ ಮತ್ತು ಮಹಿಳಾ ಕಾರ್ಯಕರ್ತೆಯರು ಗೇಟ್ ಮೇಲೆ ಹತ್ತಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ:'ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಲ್ಲ; ಬಾಲ ಬಿಚ್ಚಿದ್ರೆ ಜೆಸಿಬಿ, ಬುಲ್ಡೋಜರ್ ಹೋಗುತ್ತದೆ'
Last Updated : Apr 22, 2022, 6:34 PM IST