ಕರ್ನಾಟಕ

karnataka

ETV Bharat / city

ಕಬ್ಬನ್​​ ಪಾರ್ಕ್​ನಲ್ಲಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ವಿರೋಧಿಸಿ ಪ್ರತಿಭಟನೆ - kabban park leatest news

ಕಬ್ಬನ್ ಪಾರ್ಕಿನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್​ ಒಪ್ಪಿಗೆ ವಿರೋಧಿಸಿ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.

ಕಬ್ಬನ್ ಪಾರ್ಕಿನಲ್ಲಿ ಕಟ್ಟಡ ನಿರ್ಮಾಣ: ಪರಿಸರ ಪ್ರೇಮಿಗಳಿಂದ ಪ್ರತಿಭಟನೆ

By

Published : Nov 3, 2019, 7:32 PM IST

ಬೆಂಗಳೂರು:ಕಬ್ಬನ್ ಪಾರ್ಕಿನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್​ ಒಪ್ಪಿಗೆ ವಿರೋಧಿಸಿ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.


ಕಬ್ಬನ್ ಪಾರ್ಕಿನ ಒಳಗಡೆ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂಬ ಕಾನೂನು ಜಾರಿಯಲ್ಲಿದೆ. ಆದರೆ ಈಗ ಹೈಕೋರ್ಟ್ 7 ಅಂತಸ್ತಿನ ಕಟ್ಟಡವನ್ನು ಪಾರ್ಕ್​ನಲ್ಲಿ ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ. ಇದನ್ನು ವಿರೋಧಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು. ಕಬ್ಬನ್ ಪಾರ್ಕ್​ ಉದ್ಯಾನವನದ ವಾತಾವರಣವನ್ನು ಹಾಳು ಮಾಡಬೇಡಿ. ಕಟ್ಟಡ ನಿರ್ಮಾಣವನ್ನು ನಿಲ್ಲಿಸಿ, ಕಬ್ಬನ್ ಪಾರ್ಕ್ ಉಳಿಸಿ ಎಂದು ಘೋಷಣೆ ಕೂಗಿದರು.

ಕಬ್ಬನ್ ಪಾರ್ಕಿನಲ್ಲಿ ಕಟ್ಟಡ ನಿರ್ಮಾಣ: ಪರಿಸರ ಪ್ರೇಮಿಗಳಿಂದ ಪ್ರತಿಭಟನೆ
ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲಾ ಮಕ್ಕಳು ಭಾಗಿಯಾಗಿ ಭಿತ್ತಿ ಫಲಕಗಳನ್ನು ಹಿಡಿದು ಕಟ್ಟಡ ಕಾಮಗಾರಿ ಕೈ ಬಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕೂಡ ಸಾಥ್ ನೀಡಿದರು.

ABOUT THE AUTHOR

...view details