ಕರ್ನಾಟಕ

karnataka

ETV Bharat / city

ಬೆಂಗಳೂರು ಟೆಕ್‌ ಸಮ್ಮಿಟ್‌: ನವೆಂಬರ್‌ 17 ರಿಂದ 3 ದಿನ ಸಮಾವೇಶ, 30ಕ್ಕೂ ಹೆಚ್ಚು ದೇಶಗಳು ಭಾಗಿ - ಐಟಿ ಬಿಟಿ ಸಚಿವ ಅಶ್ವತ್ಥ್ ನಾರಾಯಣ್ ಮಾಹಿತಿ

ಬೆಂಗಳೂರು ಟೆಕ್ ಸಮ್ಮಿಟ್ - 2021, ನವೆಂಬರ್ 17 ರಿಂದ 19ರ ವರೆಗೆ ನಡೆಯಲಿದೆ ಎಂದು ಐಟಿ ಬಿಟಿ ಸಚಿವ ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದರು.

BTS
BTS

By

Published : Nov 9, 2021, 3:45 PM IST

ಬೆಂಗಳೂರು: ರಾಜ್ಯ ಸರ್ಕಾರ ಆಯೋಜನೆ ಮಾಡುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ - 2021 ನವೆಂಬರ್ 17 ರಿಂದ 19ರ ವರೆಗೆ ತಾಜ್ ವೆಸ್ಟ್ ಎಂಡ್​​ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಬಿಟಿಸ್ 2021ರ ಬಗ್ಗೆ ನಗರದ ಖಾಸಗಿ ಹೋಟೆಲ್​​ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ 30ಕ್ಕೂ ಹೆಚ್ಚಿನ ಪ್ರಮುಖರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ‌ ಈ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಸಾಧ್ಯತೆ ಇದೆ. ಕೇವಲ ಟೆಕ್ ಸಂಸ್ಥೆಗಳಲ್ಲದೇ, ಸ್ಟಾರ್ಟಪ್ ಹಾಗೂ ಬಯೋ ಟೆಕ್ನಾಲಜಿ ಕಂಪನಿಗಳು ಪಾಲ್ಗೊಳ್ಳಲಿವೆ. ಬಿಟಿಎಸ್ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥೆ ಸೌಮ್ಯ ಸ್ವಾಮಿನಾಥನ್, ನೊಬೆಲ್ ಪ್ರಶಸ್ತಿ ವಿಜೇತ ಡಾ.ವೆಂಕಟ್ ರಾಮಣ್, ರಾಮಕೃಷ್ಣನ್, ಮೈಕ್ರೋಸಾಫ್ಟ್ ಅಧ್ಯಕ್ಷ ಅನಂತ್ ಮಹೇಶ್ವರಿ, ಆ್ಯಪಲ್ ಸಂಸ್ಥೆಯ ಉಪಾಧ್ಯಕ್ಷೆ ಪ್ರಿಯ ಬಾಲಸುಬ್ರಮಣ್ಯಂ, ಭಾರತದ ಲೇಖಕ ಚೇತನ್ ಭಗತ್ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿ‌ ಆಗಲಿದ್ದಾರೆ.

ಭಾರತ ಅಮೆರಿಕಾ ರಾಷ್ಟಗಳ ಪ್ರತ್ಯೇಕ ಸಮಾವೇಶ ನಡೆಯಲಿದೆ. ಐಟಿ-ಬಿಟಿ ಹಾಗೂ ಸ್ಟಾರ್ಟಪ್​​ಗಳ ಕುರಿತು ಪಶ್ಚಿಮ, ಉತ್ತರ ಮಧ್ಯ ಅಮೆರಿಕಾ ಪ್ರಾಂತ್ಯ- ಭಾರತದ ಸಮನ್ವಯತೆ ಹಾಗೂ ನೂತನ ಅವಕಾಶಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಇನ್ಫೋಸಿಸ್ ಸಹ ಸಂಸ್ಥಾಪಕ ಎಸ್‌.ಗೋಪಾಲಕೃಷ್ಣನ್ (ಕ್ರಿಸ್) ಮಾತನಾಡಿ, ಕಳೆದ ವರ್ಷದಿಂದೀಚೆಗೆ ಹೊಸ ಸಹಜ ಸ್ಥಿತಿಯಲ್ಲಿ ಕೈಗಾರಿಕೆಗಳಲ್ಲಿ ತ್ವರಿತ ಡಿಜಿಟಲೀಕರಣವನ್ನು ನಾವು ನೋಡಿದ್ದೇವೆ ಮತ್ತು ತಂತ್ರಜ್ಞಾನದ ಪಾತ್ರವು ಹೇಗೆ ವಿಕಸನಗೊಂಡಿದೆ ಎನ್ನುವುದನ್ನು ನಾವು ಗಮನಿಸಿದ್ದೇವೆ. ಇಡೀ ವಿಶ್ವ ಭಾರತದ ಡಿಜಿಟಲ್ ತಂತ್ರಜ್ಞಾನಗಳನ್ನು ಕೋವಿಡ್ ಸಂಘರ್ಷದ ವೇಳೆ ಅಳವಡಿಸಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಇದರಿಂದಾಗಿ ಉದ್ಯಮ ಗರಿಗೆದರಿದೆ. ಉದ್ಯಮ ಮತ್ತು ತಂತ್ರಜ್ಞಾನದ ನಾಯಕರು ಒಂದೆಡೆ ಸೇರಿ ಮುಂಬರುವ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ ಉದಯೋನ್ಮುಖ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಕಾರ್ಯತಂತ್ರ ರೂಪಿಸಲು ಒಗ್ಗೂಡುವುದು ಅತ್ಯಗತ್ಯ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಉಪಸ್ಥಿತರಿದ್ದರು.

ABOUT THE AUTHOR

...view details