ಕರ್ನಾಟಕ

karnataka

ETV Bharat / city

ಉಭಯ ಕುಶಲೋಪರಿ ವಿಚಾರಿಸಿಕೊಂಡ ಬಿಎಸ್​​​ವೈ- ಬೊಮ್ಮಾಯಿ: ಆತ್ಮೀಯತೆಯ ವಿಡಿಯೋ ವೈರಲ್ - Bangalore Latest News

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್​.ಯಡಿಯೂರಪ್ಪ ಕೈಕುಲಕಿ, ನಗು ಮೊಗದಿಂದ ಉಭಯ ಕುಶಲೋಪರಿ ವಿಚಾರಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Bangalore
ಉಭಯ ಕುಶಲೋಪರಿ ವಿಚಾರಿಸಿಕೊಂಡ ಬಿಎಸ್​​​ವೈ-ಬೊಮ್ಮಾಯಿ

By

Published : Jul 29, 2021, 1:54 PM IST

ಬೆಂಗಳೂರು: ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಕೈಕುಲಕಿ ನಗು ಮೊಗದಿಂದ ಮಾತನಾಡಿದ ಹಾಲಿ ಮತ್ತು ಮಾಜಿ ಸಿಎಂ ಉಭಯ ಕುಶಲೋಪರಿ ವಿಚಾರಿಸಿಕೊಂಡರು.

ಉಭಯ ಕುಶಲೋಪರಿ ವಿಚಾರಿಸಿಕೊಂಡ ಬಿಎಸ್​​​ವೈ-ಬೊಮ್ಮಾಯಿ

ಇದೀಗ ಅವರಿಬ್ಬರ ಆತ್ಮೀಯತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕರ್ನಾಟಕದ ಜನತೆ ಈ ಬಾಂಧವ್ಯವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಕೈ-ಕೈ ಹಿಡಿದು ನಗುಮೊಗದಿಂದ ಮಾತನಾಡಿರುವ ಫೋಟೋ, ವಿಡಿಯೋ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಶಾಸಕರು ಹಾಗೂ ಹಲವು ಕಾರ್ಯಕರ್ತರು ಹೂಗುಚ್ಛ ನೀಡಿ ಖುಷಿ ಪಟ್ಟರು. ಬಿಎಸ್​ವೈ ಭೇಟಿಯ ನಂತರ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿದ ಸಿಎಂ ಬೊಮ್ಮಾಯಿ, ಇದೀಗ ಹುಬ್ಬಳ್ಳಿ- ಧಾರವಾಡಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಈಗಲೂ ಯಡಿಯೂರಪ್ಪ ಅವರೇ ನಮ್ಮ ನಾಯಕ, ಸಿಎಂ ಮನೆಗೆ ಭೇಟಿ ನೀಡುವುದರಲ್ಲಿ ತಪ್ಪೇನಿಲ್ಲ: ರೇಣುಕಾಚಾರ್ಯ

ABOUT THE AUTHOR

...view details