ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಸಾಕಷ್ಟು ಕುತೂಹಲ ಸೃಷ್ಟಿಸಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಜೋರಾಗಿಯೇ ನಡೆಯುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ರಂಗೇರಿದ ಉಪ ಚುನಾವಣೆ ಹೌದು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಡಿ.ಆರ್.ನಾರಾಯಣಸ್ವಾಮಿ ಈಗಿನಿಂದಲೇ ಚುನಾವಣೆಯಲ್ಲಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಕಳೆದ ಆರು ವರ್ಷಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ ಸುಧಾಕರ್ ಕೂಡ ಅಭಿವೃದ್ಧಿ ಮಾಡದೇ ರಾಜಕೀಯ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಸರ್ಕಾರವನ್ನು ತಾವೇ ಹಾಳು ಮಾಡಿಕೊಂಡು ಇದೀಗ ಅನರ್ಹರಾಗಿದ್ದಾರೆ ಎಂದು ಬಿಎಸ್ಪಿ ಟಿಕೆಟ್ ಆಕಾಂಕ್ಷಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಾವು ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್ಪಿ ನಾಲ್ಕೂ ಪಕ್ಷದಲ್ಲೂ ಸಮವಾದ ಪೈಪೊಟಿ ಇದೆ. ಯಾರೇ ಗೆದ್ದರು ಮೂರರಿಂದ ನಾಲ್ಕು ಸಾವಿರ ಮತಗಳಲ್ಲಿ ಜಯ ಗಳಿಸುತ್ತಾರೆ ಅಷ್ಟೇ. ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಈ ಸಲ ಸೋಲಿಸಬೇಕಿದೆ. ಯಾರು ಉಪ ಚುನಾವಣೆಗೆ ಕಾರಣರಾಗಿದ್ದಾರೋ ಅವರನ್ನು ಈ ಸಲ ಜನರು ಸೋಲಿಸಲಿದ್ದಾರೆ. ಅದೇ ರೀತಿ ನಾವೂ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟಿದ್ದೇವೆ ಎಂದು ಡಿ.ಆರ್.ನಾರಾಯಣಸ್ವಾಮಿ ಹೇಳಿದರು.