ಬೆಂಗಳೂರು:7,500 ರೂ. ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ಭ್ರಷ್ಟ ಅಧಿಕಾರಿಗೆ 5 ವರ್ಷ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಮಾಜಿ ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಪಿ ಸದಾಶಿವ ಶಿಕ್ಷೆಗೆ ಗುರಿಯಾದವರು. 2017ರಲ್ಲಿ ಎಸಿಬಿ ಕಾರ್ಯಾಚರಣೆ ವೇಳೆ ಲಂಚ ಪಡೆಯುವಾಗ ಇವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು.
ಬೆಂಗಳೂರು: ಲಂಚ ಸ್ವೀಕರಿಸಿದ್ದ ಅಧಿಕಾರಿಗೆ 5 ವರ್ಷ ಸಜೆ - Officer five Years Punishment
ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಮಾಜಿ ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಪಿ ಸದಾಶಿವ ಅವರಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೆಚ್.ಪಿ ಸದಾಶಿವ
ಸಂಘವೊಂದರ ನೋಂದಣಿ ಪ್ರಕ್ರಿಯೆಗೆ 10 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದು, 7,500 ರೂ. ಹಣ ಸ್ವೀಕರಿಸುವಾಗ ಎಸಿಬಿ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು. ಈ ಕುರಿತು ಎಸಿಬಿ ವಿಚಾರಣೆ ನಡೆಸಿ 2018ರಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ 23 ನೇ ಸಿಟಿ ಸಿವಿಲ್ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಕೇಸ್: 10 ತಾಸು ರಾಹುಲ್ಗೆ ಇಡಿ ಡ್ರಿಲ್... ಇಂದೂ ವಿಚಾರಣೆ ಸಾಧ್ಯತೆ