ಬೆಂಗಳೂರು:ವಿದ್ಯುತ್ ಸಂಪರ್ಕ ಬದಲಾವಣೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ನನ್ನು ಎಸಿಬಿ ವಶಕ್ಕೆ ಪಡೆದಿದೆ. ಬೆಂಗಳೂರು ಉತ್ತರ ವೃತ್ತದ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಬಸವೇಶ್ವರ ನಗರ ನಿವಾಸಿಯೊಬ್ಬರು ಹೈ ಟೆನ್ಷನ್ ವಿದ್ಯುತ್ ಸಂಪರ್ಕದಿಂದ ಲೋ ಟೆನ್ಷನ್ ಸಂಪರ್ಕ ಒದಗಿಸಲು ಮನವಿ ಸಲ್ಲಿಸಿದ್ದರು.
ಬೆಂಗಳೂರು: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್
ಹೈಟೆನ್ಷನ್ನಿಂದ ಲೋ ಟೆನ್ಷನ್ಗೆ ಸಂಪರ್ಕ ಬದಲಾಯಿಸುವುದಕ್ಕೆ ಕಚೇರಿಯಲ್ಲೇ 10 ಸಾವಿರ ಲಂಚ ಪಡೆಯುತ್ತಿದ್ದ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ನನ್ನು ಎಸಿಬಿ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್
ಇದಕ್ಕಾಗಿ 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಶಿವಾನಂದ ಸರ್ಕಲ್ ಬಳಿಯ ಬೆಸ್ಕಾಂ ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿರುವ ಎಸಿಬಿ ಹೆಚ್ಚಿನ ವಿಚಾರಣೆ ಕೈಗೊಂಡಿದೆ.
ಇದನ್ನೂ ಓದಿ:ಚುನಾವಣೆಗಳು 'ಜನಾದೇಶ'ವಾಗುವ ಬದಲು 'ಧನಾದೇಶ'ವಾಗುತ್ತಿವೆ: ಸ್ಪೀಕರ್ ಕಾಗೇರಿ