ಬೆಂಗಳೂರು:ರಾಜ್ಯದಲ್ಲಿ ಹೆಚ್ಚು ಸ್ತನ ಕ್ಯಾನ್ಸರ್ಗೆ ಒಳಗಾದವರ ಸಂಖ್ಯೆ ಹೆಚ್ಚು. ಗರ್ಭಕಂಠ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ನಂತರದ ಸ್ಥಾನದಲ್ಲಿವೆ.
ರಾಜ್ಯದಲ್ಲಿ ಶೇ.28ರಷ್ಟು ಸ್ತನ ಕ್ಯಾನ್ಸರ್, ಶೇ.12ರಷ್ಟು ಗರ್ಭಕಂಠದ ಕ್ಯಾನ್ಸರ್, ಶೇ.6ರಷ್ಟು ಅಂಡಾಶಯದ ಕ್ಯಾನ್ಸರ್ ಕಾಡುತ್ತಿದೆ. ಶ್ವಾಸಕೋಶ ಕ್ಯಾನ್ಸರ್ ಶೇ.10, ಜಠರಾ ಕ್ಯಾನ್ಸರ್ ಶೇ.7ರಷ್ಟು, ಪ್ರಾಸ್ಟೇಟ್ ಕ್ಯಾನ್ಸರ್ ಶೇ.6ರಷ್ಟು ಪ್ರಮಾಣದಲ್ಲಿದೆ.
ಕರ್ನಾಟಕದಲ್ಲಿ ಶೇ.28ರಷ್ಟು ಸ್ತನ ಕ್ಯಾನ್ಸ ಕ್ಯಾನ್ಸರ್ ಮೊದಲ ಹಂತದಲ್ಲಿ ಇದ್ದಾಗಲೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಅರಿವು ಇಲ್ಲದಿರುವುದು ಮತ್ತು ನಿರ್ಲಕ್ಷ್ಯದಿಂದ ಕೊನೆ ಹಂತ ತಲುಪಿದ ನಂತರ ಆಸ್ಪತ್ರೆ ಕದ ತಟ್ಟುತ್ತಾರೆ. ಈ ಮೊದಲು ವಯಸ್ಕರಿಗೆ ಮಾತ್ರ ಕ್ಯಾನ್ಸರ್ ಕಾಡುತ್ತಿತ್ತು. ಇತ್ತೀಚೆಗೆ ಸಣ್ಣ ಮಕ್ಕಳಿಂದ ಹಿಡಿದು ಎಲ್ಲರನ್ನೂ ಕಾಡುತ್ತಿದೆ ಎಂದು ವಿಕ್ರಮ್ ಆಸ್ಪತ್ರೆಯ ಕ್ಯಾನ್ಸರ್ ಸರ್ಜನ್ ಡಾ.ಸೂರಜ್ ಮಂಜುನಾಥ್ ಹೇಳಿದರು.
ಇದನ್ನೂ ಓದಿ...ಭೀಕರ ರಸ್ತೆ ಅಪಘಾತ: ಟ್ರಕ್ ಪಲ್ಟಿಯಾಗಿ 15 ಕೂಲಿ ಕಾರ್ಮಿಕರ ದಾರುಣ ಸಾವು!
ತಂಬಾಕು ಸೇವನೆಯಿಂದ ಯುವಕರು ಬಹುಬೇಗ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. ವಿದೇಶದಲ್ಲಿ 50 ವರ್ಷ ದಾಟಿದ ನಂತರ ಸ್ತನ ಕ್ಯಾನ್ಸರ್ ಕಾಣಿಸಿಕೊಂಡರೆ ಭಾರತದಲ್ಲಿ 40 ವರ್ಷಕ್ಕೇ ಮಹಿಳೆಯರನ್ನು ಬಾದಿಸುತ್ತಿದೆ ಎಂದರು.
ಯುವಕರಿಗೆ ಶಸ್ತ್ರಚಿಕಿತ್ಸೆ ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಸಕಾರಾತ್ಮಕವಾಗಿ ಯೋಚಿಸುತ್ತಾರೆ. ಅಲ್ಲದೇ, ಅವರಿಗೆ ವಯಸ್ಕರಂತೆ ಶುಗರ್, ಬಿಪಿಯಂತಹ ಕಾಯಿಲೆಗಳು ಇರುವುದಿಲ್ಲ. ಹೀಗಾಗಿ, ಯುವಕರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಚಿಕಿತ್ಸೆ ಅಷ್ಟು ಕಷ್ಟವೇನಲ್ಲ. ದೇಹದಲ್ಲಿ ಏನೇ ತೊಂದರೆ ಕಾಣಿಸಿಕೊಂಡರೂ ವೈದ್ಯರನ್ನು ಸಂಪರ್ಕಿಸುವುದು ಅತಿ ಮುಖ್ಯ. ಹಾಗೆಯೇ ಜಾಗೃತಿಯೂ ಅಗತ್ಯ ಎಂದು ಮಾಹಿತಿ ನೀಡಿದರು.