ಕರ್ನಾಟಕ

karnataka

ETV Bharat / city

ಕೋವಿಡ್ ಲಸಿಕೆಯ ಫಸ್ಟ್ ಡೋಸ್ ಪಡೆದವ್ರಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಹೆಚ್ಚಳ.. ತ್ರಿಲೋಕ‌ ಚಂದ್ರರ ಸಲಹೆ ಏನು? - ಸೋಂಕು

ವ್ಯಾಕ್ಸಿನ್ ಪಡೆದವರಿಗೆ ಕೊರೊನಾ ಸೋಂಕಿನಿಂದ ಅಪಾಯ ಕಡಿಮೆ ಇದ್ದರೆ, ವ್ಯಾಕ್ಸಿನ್ ಪಡೆಯದವರಿಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೆಚ್ಚಿನವರು ಸಾವಿಗೀಡಾಗುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದವರೇ ಹೆಚ್ಚು ಐಸಿಯು ಬೆಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದವರಲ್ಲಿ ಶೇ.20ರಷ್ಟು ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಳ್ತಿದೆ. ಆದರೆ, ವ್ಯಾಕ್ಸಿನ್ ಪಡೆಯದವರಲ್ಲಿ ಶೇ. 80ರಷ್ಟು ಸೋಂಕು ಕಾಣಿಸಿದೆ.‌.

Health Department Commissioner Triloka Chandra
ಆರೋಗ್ಯ ಇಲಾಖೆಯ ಆಯುಕ್ತ ತ್ರಿಲೋಕ‌ ಚಂದ್ರ

By

Published : Oct 1, 2021, 3:30 PM IST

ಬೆಂಗಳೂರು: ಲಸಿಕೆ ಪಡೆದವರಿಗೂ ಕೋವಿಡ್ ಸೋಂಕು ಬಾಧಿಸುತ್ತಿದೆ. ರಾಜ್ಯದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ಸ್ ಸಂಖ್ಯೆ‌ ಹೆಚ್ಚಳವಾಗಿದೆ. ಈವರೆಗೆ 15,000 ಬ್ರೇಕ್ ಥ್ರೂ ಇನ್ಫೆಕ್ಷನ್ಸ್ ಪತ್ತೆಯಾಗಿವೆ.

ಬ್ರೇಕ್‌ ಥ್ರೂ ಇನ್ಫೆಕ್ಷನ್ :ಬ್ರೇಕ್‌ ಥ್ರೂ ಇನ್ಫೆಕ್ಷನ್ ಅಂದರೆ ವ್ಯಾಕ್ಸಿನ್ ಪಡೆದ ಬಳಿಕವೂ ಸೋಂಕು ಕಾಣಿಸುವುದು. ಲಸಿಕೆಯ ಮೊದಲ ಡೋಸ್ ಪಡೆದವರಲ್ಲೇ ಅಧಿಕ ಸೋಂಕು ಪತ್ತೆಯಾಗಿದೆ.

ಎರಡೂ ಡೋಸ್ ಲಸಿಕೆ ಪಡೆದ ಹೆಚ್ಚಿನವರು ಬ್ರೇಕ್ ಥ್ರೂ ಸೋಂಕಿನಿಂದ ಪಾರಾಗಿದ್ದಾರೆ. ಒಂದು ಡೋಸ್ ಲಸಿಕೆ ಪಡೆದ ಸುಮಾರು 13,000 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಎರಡು ಡೋಸ್ ಲಸಿಕೆ ಪಡೆದ 2,000 ಮಂದಿಯಲ್ಲಿ ಸೋಂಕು ತಗುಲಿದೆ.

ಲಸಿಕೆ ಪಡೆದವರಲ್ಲೂ ಸೋಂಕು ಕಾಣಿಸಿಕೊಳ್ತಿರುವ ಕುರಿತು ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ‌ ಚಂದ್ರ ಮಾಹಿತಿ..

ವ್ಯಾಕ್ಸಿನ್ ಬಳಿಕವೂ ಮಾರ್ಗಸೂಚಿ ಮರೆಯದಿರಿ :ಈ ಕುರಿತು ಮಾತಾನಾಡಿರುವ ಆರೋಗ್ಯ ಇಲಾಖೆಯ ಆಯುಕ್ತ ತ್ರಿಲೋಕ‌ ಚಂದ್ರ, ವ್ಯಾಕ್ಸಿನ್ ಪಡೆದ ಬಳಿಕವೂ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಸೋಂಕು ತಗುಲುವುದಿಲ್ಲ ಅನ್ನೋ ಮನಸ್ಥಿತಿಯಿಂದ ಹೊರ ಬರಬೇಕು. ವ್ಯಾಕ್ಸಿನ್​​ನಿಂದಾಗಿ ರೋಗದ ಗಂಭೀರತೆ ಕಡಿಮೆ ಇರಲಿದೆ ಎಂದರು.

ಒಂದು ಡೋಸ್ ಲಸಿಕೆ ಪಡೆದವರು ಎಚ್ಚರಿಕೆಯಿಂದಿರಿ :ಲಸಿಕೀಕರಣ ಶುರುವಾದ ದಿನದಿಂದ ಬ್ರೇಕ್ ಥ್ರೂ ಇನ್ಪೆಕ್ಷನ್ ಎಲ್ಲ ಜಿಲ್ಲೆಗಳಲ್ಲೂ ರಿಪೋರ್ಟ್ ಆಗಿದೆ. ಆದರೆ, ಸಮಾಧಾನಕರ ಸಂಗತಿ ಅಂದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಬಹಳ ಕಡಿಮೆ ಇದೆ.‌ ಎರಡೂ ಡೋಸ್ ಪಡೆದಿರುವವರು ಹೋಮ್ ಐಸೋಲೇಷನ್​ನಲ್ಲೇ‌ ಇದ್ದು, ಗುಣಮುಖರಾಗುತ್ತಿದ್ದಾರೆ. ಕೇವಲ ಒಂದು ಡೋಸ್ ಲಸಿಕೆ ಪಡೆದವರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.‌

ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್‌, ಅನ್​​ವ್ಯಾಕ್ಸಿನೇಷನ್‌ ಅಂಕಿ-ಅಂಶ :ಕೊರೊನಾ 3ನೇ ಅಲೆಯಲ್ಲಿ ವ್ಯಾಕ್ಸಿನೇಷನ್‌ ಆಗದವರೇ ಹೆಚ್ಚಿನ ಟಾರ್ಗೆಟ್ ಆಗಲಿದ್ದಾರೆ. ‌ಇದಕ್ಕೆ ಕಳೆದ 14 ದಿನದ ಆಸ್ಪತ್ರೆ ದಾಖಲಾತಿ ವಿವರವೇ ಸಾಕ್ಷಿಯಾಗಿದೆ‌. ಬೆಂಗಳೂರಿನಲ್ಲಿ ಕಳೆದ 14 ದಿನದಲ್ಲಿ 32 ಮಂದಿ ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ. ಇದರಲ್ಲಿ ಐಸಿಯುಗೆ ದಾಖಲಾದ 25 ಮಂದಿ ವ್ಯಾಕ್ಸಿನ್ ಪಡೆಯದ ಸೋಂಕಿತರಾಗಿದ್ದರು.

ವ್ಯಾಕ್ಸಿನ್ ಪಡೆದು ಕೂಡ ICUಗೆ ದಾಖಲಾದವರು 7 ಮಂದಿ ಮಾತ್ರ. ಇನ್ನು ಕಳೆದ 14 ದಿನದಲ್ಲಿ HDU ಬೆಡ್​ನಲ್ಲಿ ದಾಖಲಾದ‌ವರು 39 ಮಂದಿ. ಈ ಪೈಕಿ ವ್ಯಾಕ್ಸಿನ್ ಪಡೆಯದವರು 20 ಮಂದಿ ಹಾಗೂ ವ್ಯಾಕ್ಸಿನ್ ‌ಪಡೆದವರು 19 ಮಂದಿಯಿದ್ದರು.

ವ್ಯಾಕ್ಸಿನ್ ಪಡೆದವರಿಗೆ ಕೊರೊನಾ ಸೋಂಕಿನಿಂದ ಅಪಾಯ ಕಡಿಮೆ ಇದ್ದರೆ, ವ್ಯಾಕ್ಸಿನ್ ಪಡೆಯದವರಿಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೆಚ್ಚಿನವರು ಸಾವಿಗೀಡಾಗುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದವರೇ ಹೆಚ್ಚು ಐಸಿಯು ಬೆಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದವರಲ್ಲಿ ಶೇ.20ರಷ್ಟು ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಳ್ತಿದೆ. ಆದರೆ, ವ್ಯಾಕ್ಸಿನ್ ಪಡೆಯದವರಲ್ಲಿ ಶೇ. 80ರಷ್ಟು ಸೋಂಕು ಕಾಣಿಸಿದೆ.‌

ಇದನ್ನೂ ಓದಿ:ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ 2022ರ ಸೆಪ್ಟೆಂಬರ್​ನಲ್ಲಿ ಸಿದ್ದ : ಸಚಿವ ಸಿ ಸಿ ಪಾಟೀಲ್

ಸಾವಿನ ಸಂಖ್ಯೆಯಲ್ಲಿಯೂ ವ್ಯಾಕ್ಸಿನ್ ಪಡೆದವರು ಶೇ.15-20ರಷ್ಟಿದ್ದರೆ, ಶೇ.80-85 ವ್ಯಾಕ್ಸಿನ್ ಪಡೆಯದವರೇ ಕೊರೊನಾಗೆ ಬಲಿಯಾಗ್ತಿದ್ದಾರೆ. ವ್ಯಾಕ್ಸಿನ್ ಪಡೆಯದವರಿಗೆ ಕೊರೊನಾ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

ಶೇ.80-85 ರಷ್ಟು ICU ಬೆಡ್ ಅಗತ್ಯತೆ ಎದುರಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಶೇ.20ರಷ್ಟು ಐಸಿಯು ಬೆಡ್ ಅಗತ್ಯತೆ ಕೇಳಿ ಬಂದಿದೆ.‌ ಹೀಗಾಗಿ, ವ್ಯಾಕ್ಸಿನ್ ಪಡೆಯದವರು ಕೊಂಚ ಎಚ್ಚರಿಕೆಯಿಂದ ಇರಬೇಕು. ಹಾಗೇಯೇ ಉಳಿದವರು ಬಹುಬೇಗ ಲಸಿಕೆ ಪಡೆದುಕೊಳ್ಳೋದು ಉತ್ತಮ ಎಂದರು.

ABOUT THE AUTHOR

...view details