ಕರ್ನಾಟಕ

karnataka

ETV Bharat / city

'ಬ್ರಾಹ್ಮಿನ್ ಕಾಫಿ ಬಾರ್' ಉಪಹಾರ ಗೃಹ ಹೆಸರಿನಲ್ಲಿ ಅಂಚೆ ಚೀಟಿ: ದೇಶದ ಇತಿಹಾಸದಲ್ಲಿ ಇದೇ ಮೊದಲು - postage stamp in the name of the eatery

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಂಕರಪುರಂನ 'ಬ್ರಾಹ್ಮಿನ್ ಕಾಫಿ ಬಾರ್' ಹೋಟೆಲ್​ ಹೆಸರಿನಲ್ಲಿ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿಯನ್ನು ಹೊರ ತರುತ್ತಿದೆ.

'Brahmin Coffee Bar' is a postage stamp in the name of the eatery
'ಬ್ರಾಹ್ಮಿನ್ ಕಾಫಿ ಬಾರ್' ಉಪಹಾರ ಗೃಹ

By

Published : Jan 13, 2020, 11:53 PM IST

ಬೆಂಗಳೂರು:ಇಲ್ಲಿನ'ಬ್ರಾಹ್ಮಿನ್ ಕಾಫಿ ಬಾರ್' ಹೋಟೆಲ್​​ಗೆ ಅಂಚೆ ಚೀಟಿಯ ಗೌರವ ದೊರಕಿದೆ. ಒಂದು ಉಪಹಾರ ಗೃಹಕ್ಕೆ ಈ ಗೌರವ ದೊರೆಯುತ್ತಿರುವುದು ದೇಶದ ಇತಿಹಾಸದಲ್ಲಿಯೇ ಇದೇ ಮೊದಲು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

55 ವರ್ಷಗಳಿಂದ ಬೆಂಗಳೂರಿನ ಜನರಿಗೆ ಉಪಹಾರ ಉಣಬಡಿಸುತ್ತಿರುವ ಚಾಮರಾಜಪೇಟೆಯಲ್ಲಿರುವ ಶಂಕರಪುರಂನ 'ಬ್ರಾಹ್ಮಿನ್ ಕಾಫಿ ಬಾರ್' ಹೋಟೆಲ್​ ಹೆಸರಿನಲ್ಲಿ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿಯನ್ನು ಹೊರ ತರುತ್ತಿದೆ.

ಹೋಟೆಲ್​​​ನ ಇಡ್ಲಿ-ವಡೆ-ಚಟ್ನಿ ಸುಪ್ರಸಿದ್ಧ ಉಪಹಾರ

1965 ಜನವರಿ 27ರಂದು ಕೆ.ವಿ.ನಾಗೇಶ್​ ಅಡಿಗರು ಈ ಉಪಹಾರ ಗೃಹ ಅನ್ನು ಆರಂಭಿಸಿದರು. ಕಾಫಿ-ಟೀ, ಇಡ್ಲಿ-ವಡೆ-ಚಟ್ನಿ, ಉಪ್ಪಿಟ್ಟು, ಕೇಸರಿ ಬಾತ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಉಪಹಾರಗಳಿಗೆ ಇದು ಸುಪ್ರಸಿದ್ಧವಾಗಿದೆ.

'ಬ್ರಾಹ್ಮಿನ್ ಕಾಫಿ ಬಾರ್' ಉಪಹಾರ ಗೃಹ

ಇದೇ 27 ರಂದು (ಜನವರಿ 27) ಸೋಮವಾರ ಸಂಜೆ 5.30ಕ್ಕೆ ನಗರದ ಚಾಮರಾಜಪೇಟೆಯ ಮರಾಠ ಹಾಸ್ಟೆಲ್​ ಮೈದಾನದಲ್ಲಿ ಈ ಹೋಟೆಲ್​ ಹೆಸರಿನಲ್ಲಿ ಅಂಚೆ ಚೀಟಿ ಮಾಡಲಾಗುತ್ತದೆ.

ABOUT THE AUTHOR

...view details