ಬೆಂಗಳೂರು : ನಗರದ ಹಲಸೂರು ಠಾಣಾ ವ್ಯಾಪ್ತಿಯ ಎಮ್.ವಿ ಗಾರ್ಡನ್ನಲ್ಲಿ ಗಾಂಜಾ ಮತ್ತಿನಲ್ಲಿ ಸ್ನೇಹಿತನಿಂದಲೇ ಯುವಕನ ಬರ್ಬರ ಹತ್ಯೆ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮಿನ್ಯುಸ್ (18) ಮೃತ ಯುವಕ.
ಹಲಸೂರು ಠಾಣಾ ವ್ಯಾಪ್ತಿಯ ಎಮ್.ವಿ ಗಾರ್ಡನ್ನಲ್ಲಿ ಶುಕ್ರವಾರ ತಡರಾತ್ರಿ ಸ್ನೇಹಿತರ ನಡುವೆ ಗಾಂಜಾ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಸಂತೋಷ್ ಆಪರೇಷನ್ ಬ್ಲೇಡ್ ತೆಗೆದುಕೊಂಡ ಮಿನ್ಯುಸ್ ಕತ್ತಿಗೆ ಚುಚ್ಚಿದ್ದಾನೆ. ನಂತರ ಅರೋಪಿಗಳು ಕುತ್ತಿಗೆ ಸೀಳಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಿನ್ಯುಸ್ನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮಿನ್ಯುಸ್ ಮೃತಪಟ್ಟಿದ್ದಾನೆ ಎಂದಿದ್ದಾರೆ.