ಬೆಂಗಳೂರು:ದೀಪಾವಳಿ ಹಬ್ಬದ ದಿನವೇ ನಗರದಲ್ಲಿ ಪಟಾಕಿ ಅವಘಡ ಸಂಭವಿಸಿದೆ. ಬಣ್ಣ ಬಣ್ಣದ ಪಟಾಕಿಗಳು ಮಕ್ಕಳ ಖುಷಿಯನ್ನು ಹೆಚ್ಚಿಸಿದ್ರೂ, ಅದರ ಹಿಂದೆಯೇ ಅಪಾಯ ಕಾದಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ.
ಈಗಾಗಲೇ 9 ವರ್ಷದ ಬಾಲಕನ ಕಣ್ಣಿಗೆ ಪಟಾಕಿಯಿಂದ ಹಾನಿಯಾಗಿದ್ದು, ಮುಖದ ಚರ್ಮ ಸುಟ್ಟು ಹೋಗಿದೆ. ಸದ್ಯ ಬಾಲಕ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಸವನಗುಡಿ ನಿವಾಸಿಯಾಗಿರುವ ಈ ಬಾಲಕ ನಿನ್ನೆ (ಬುಧವಾರ) ರಾತ್ರಿ ತನ್ನ ಮನೆಯಲ್ಲಿ ಫ್ಲವರ್ ಪಾಟ್ (ಹೂಕುಂಡ) ಪಟಾಕಿಯನ್ನು ಸಿಡಿಸಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.