ಬೆಂಗಳೂರು: ನಗರದ ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ನೀಡುವ ಆಹಾರ ಪದಾರ್ಥಗಳ ಕಿಟ್ ಅನ್ನು ಕರ್ನಾಟಕ ನಾಗರಿಕ ರಕ್ಷಣಾ ಪಡೆ (ಸಿವಿಲ್ ಡಿಫೆನ್ಸ್) ಮನೆ ಮನೆಗೆ ತಲುಪಿಸುತ್ತಿದ್ದು, ಈ ಕಾರ್ಯಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 13 ಸಾವಿರ ಸ್ವಯಂ ಸೇವಕರು ಬೆಂಗಳೂರಿನಲ್ಲಿದ್ದಾರೆ. ಯಾವುದೇ ಸಂಬಳ ಇಲ್ಲದೆ ಅವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದರು. ಕಳೆದ 30 ದಿನಗಳಿಂದ ಕೇಂದ್ರದ ಹಣಕಾಸು ನೆರವಿನಿಂದ ಆಹಾರ ಹಂಚಿಕೆ ಕಾರ್ಯ ಮಾಡಲಾಗುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂದು ಸಿಎಂ ಆದೇಶ ನೀಡಿದ್ದಾರೆ. ಪ್ರತಿದಿನ 15 ಪದಾರ್ಥಗಳ ಪ್ಯಾಕೇಟ್ ತಯಾರಿಸಿ ಹಂಚಿಕೆ ಮಾಡುತ್ತಿದ್ದಾರೆ. ಜೊತೆಗೆ 21 ದಿನಕ್ಕೆ ಬೇಕಾಗುವಷ್ಟು ರೇಷನ್ ಸಹ ಹಂಚಲಾಗುತ್ತಿದೆ ಎಂದರು.