ಬೆಂಗಳೂರು :ಮಹಿಳೆ ಮೇಲೆ ಜೊಮ್ಯಾಟೊ ಕಂಪನಿಯ ಡೆಲಿವರಿ ಬಾಯ್ನಿಂದ ಹಲ್ಲೆ ಆರೋಪ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಲ್ಲಿದೆ. ಪರ-ವಿರೋಧ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಡೆಲಿವರಿ ಬಾಯ್ ಪರ ನಿಂತಿದ್ದಾರೆ.
ಡೆಲಿವರಿ ಬಾಯ್ ಕಾಮರಾಜ್ ಪರ ನಟಿ ಪರಿಣಿತಿ ಚೋಪ್ರಾ ಟ್ವೀಟ್ ಮಾಡಿ, ಘಟನೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬೇಕು. ಡೆಲಿವರಿ ಬಾಯ್ ಮುಗ್ಧನಾಗಿದ್ದಾನೆ. ನಾನು ಆತನ ಮಾತನ್ನು ನಂಬುತ್ತೇನೆ. ಆ ಯುವತಿಯನ್ನು ಪ್ರಶ್ನಿಸಬೇಕು. ತಾನು ಡೆಲಿವರಿ ಬಾಯ್ಗೆ ಸಹಾಯ ಮಾಡಲು ಸಿದ್ಧವಿರುವುದಾಗಿ ಟ್ವೀಟರ್ನಲ್ಲಿ ನಟಿ ಬರೆದುಕೊಂಡಿದ್ದಾರೆ.