ದೊಡ್ಡಬಳ್ಳಾಪುರ: ತಾಲೂಕಿನ ಮಾರಸಂದ್ರ ಬಳಿ ಇಂದು ಸಂಜೆ ಭೀಕರ ಅಪಘಾತ ನಡೆದಿದೆ. ಬೈಕ್ ಸವಾರ ಮತ್ತು ಬೊಲೆರೊ ಚಾಲಕ ಇಬ್ಬರು ಗಂಭೀರವಾಗಿ ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದ ಮಾರಸಂದ್ರ ತಿರುವಿನಲ್ಲಿ ಬೈಕ್ ಸವಾರ ಕ್ರಾಸ್ ಮಾಡುವಾಗ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಬೊಲೆರೊ ವಾಹನ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಅದೇ ವೇಗದಲ್ಲಿ ಬೊಲೆರೊ ಡಿವೈಡರ್ ಮೇಲೆ ಹತ್ತಿದೆ. ಪರಿಣಾಮ ಎರಡು ಲೈಟ್ ಕಂಬಗಳಿಗೆ ಗುದ್ದಿ ಪಲ್ಟಿ ಹೊಡೆದು ಚಾಲಕನಿಗೆ ಗಂಭೀರ ಗಾಯಗಳಾಗಿವೆ.