ಬೆಂಗಳೂರು: ಪ್ರಯಾಣಿಕರ ಆರಾಮದಾಯಕವಾಗುವ ಹಾಗೂ ಮಿತವ್ಯಯ ದರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹವಾ ನಿಯಂತ್ರಿತ ಬಸ್ ಸೇವೆಯನ್ನು ಇಂದಿನಿಂದ ಪುನರಾರಂಭಿಸಿದೆ.
ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಕೆಂಪೇಗೌಡ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವರೆಗೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ಇಸ್ಕಾನ್, ವಿಧಾನಸೌಧ, ಟಿಪ್ಪು ಪ್ಯಾಲೇಸ್, ಗವಿಗಂಗಾಧರೇಶ್ವರ ದೇಗುಲ, ಎಂ.ಜಿ. ರಸ್ತೆ, ಹಲಸೂರು ಕೆರೆ, ಕಬ್ಬನ್ ಪಾರ್ಕ್ ಹಾಗೂ ಚಿತ್ರಕಲಾ ಪರಿಷತ್ ಮಾರ್ಗದಲ್ಲಿ 'ಬೆಂಗಳೂರು ದರ್ಶಿನಿ ಬಸ್' ಕಾರ್ಯಾಚರಣೆ ನಡೆಸಲಿದೆ.