ಬೆಂಗಳೂರು: ಬಿಎಂಟಿಸಿ(BMTC) ಸಂಸ್ಥೆಯು ದೇಶದಲ್ಲೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು (Bharat Stage Emission Standards) ಖರೀದಿಸಲು ಮುಂದಾಗಿದೆ. ಈ ವಾಹನಗಳು ಅತೀ ಶೀಘ್ರದಲ್ಲಿಯೇ ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ. ಈಗಾಗಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಮಾದರಿಯ BS VI ಬಸ್ನ್ನು ಪರಿವೀಕ್ಷಣೆ ಮಾಡಿದ್ದಾರೆ.
ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ BS VI ವಾಹನ ಖರೀದಿಸಲು ಮುಂದಾದ BMTC - BS VI ಬಸ್
ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು (BMTC buys BS VI vehicle) ಖರೀದಿಸಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ. ಅಶೋಕ್ ಲೇಲ್ಯಾಂಡ್ ಪ್ರೈ. ಲಿಮಿಟೆಡ್ ಮುಂದಿನ ಫೆಬ್ರುವರಿ 2022 ರೊಳಗಾಗಿ ಬೆಂ.ಮ.ಸಾ.ಸಂಸ್ಥೆಗೆ ಬಸ್ಗಳನ್ನು ಪೂರೈಸಲಿದೆ.
ಬಿಎಸ್ ವಿಐ ವಾಹನ
ಸಂಸ್ಥೆಯು BS VI ಮಾದರಿಯ ಒಟ್ಟು 565 ಬಸ್ಗಳನ್ನು ಅಶೋಕ್ ಲೇಲ್ಯಾಂಡ್ ಪ್ರೈ. ಲಿಮಿಟೆಡ್ (M/s Ashok Leyland pvt. Ltd) ಅವರಿಂದ ಖರೀದಿಸಲು (BMTC buys BS VI vehicle) ಕಾರ್ಯಾದೇಶ ನೀಡಿದೆ. ಅದರಂತೆ ಎಲ್ಲಾ ಬಸ್ಸುಗಳನ್ನು ಮುಂದಿನ ಫೆಬ್ರುವರಿ 2022 ರೊಳಗಾಗಿ ಬೆಂ.ಮ.ಸಾ.ಸಂಸ್ಥೆಗೆ ಪೂರೈಸಲಿದ್ದಾರೆ. ಈ ವಾಹನವನ್ನು 2017-18 ರಲ್ಲಿ ಬಸ್ಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ.
BS VI ವಾಹನಗಳ ವೈಶಿಷ್ಟ್ಯತೆ
- ಇದು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ.
- ಈ ವಾಹನವು BS IV ವಾಹನಗಳಿಗಿಂತ ಹೆಚ್ಚಿನ Engine ಸಾಮರ್ಥ್ಯವನ್ನು ಹೊಂದಿರುತ್ತದೆ (197HP).
- ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರುತ್ತದೆ.