ಕರ್ನಾಟಕ

karnataka

By

Published : May 5, 2020, 4:32 PM IST

ETV Bharat / city

ಕೈಗಾರಿಕೆ-ಕಂಪನಿಗಳಿಗೆ ಉತ್ತೇಜನ ನೀಡಲು ಬಿಎಂಟಿಸಿ ಬಸ್​ ಬಾಡಿಗೆ ದರ ಕಡಿತ!

ಲಾಕ್​​​ಡೌನ್​ನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆ ಪುನರ್ ಆರಂಭಿಸಿರುವ ಸಲುವಾಗಿ ಬಿಎಂಟಿಸಿ ಬಸ್​ಗಳ ಬಾಡಿಗೆಯನ್ನು ಸರ್ಕಾರ ಕಡಿಮೆಗೊಳಿಸಿದೆ.

bmtc
ಬಿಎಂಟಿಸಿ

ಬೆಂಗಳೂರು: ಲಾಕ್​​​ಡೌನ್​ನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆ ಪುನರ್ ಆರಂಭಿಸಿರುವ ಸರ್ಕಾರ, ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಬಿಎಂಟಿಸಿ ಬಸ್​​ಗಳನ್ನು ಒಪ್ಪಂದದ ಮೇಲೆ ನೀಡುವ ದರದಲ್ಲಿ ಇಳಿಕೆ ಮಾಡಿದೆ.

ಬಿಎಂಟಿಸಿ ಪ್ರಕಟಣೆ

ಖಾಸಗಿ ಕಂಪನಿ, ಕೈಗಾರಿಕೆಗಳು, ಐಟಿ/ಬಿಟಿ ಕಂಪನಿಗಳಿಗೆ ಬಾಡಿಗೆ ಆಧಾರದಲ್ಲಿ ಬಿಎಂಟಿಸಿ ಬಸ್ ಸೇವೆ ಒದಗಿಸುತ್ತಿದ್ದು, ಈಗಿನ ದರದಲ್ಲಿ ಕಡಿತ ಮಾಡುವ ನಿರ್ಧಾರ ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕಡಿಮೆ ಬಾಡಿಗೆಯಲ್ಲಿ ಬಸ್ ಸೌಲಭ್ಯ ನೀಡುವುದಾಗಿ ಬಿಎಂಟಿಸಿ ಪ್ರಕಟಿಸಿದೆ.

ವಿವಿಧ ಬಸ್​ಗಳಿಗೆ ಸಮಯಕ್ಕೆ ಅನುಗುಣವಾಗಿ ನಿಗದಿಪಡಿಸಿರುವ ದರಗಳು

12 ಗಂಟೆ ಅವಧಿ (100 ಕಿ.ಮೀ)
ಮಿಡಿ ಬಸ್ - 4500 ರೂ.
ಸಾಮಾನ್ಯ ಬಸ್ - 5000 ರೂ.
ಪುಷ್ಪಕ್ - 6000 ರೂ.


12 ಗಂಟೆ ಅವಧಿ (150 ಕಿ.ಮೀ)
ಮಿಡಿ ಬಸ್ - 6000 ರೂ.
ಸಾಮಾನ್ಯ ಬಸ್ - 6500 ರೂ.
ಪುಷ್ಪಕ್ - 7500 ರೂ.

12 ಗಂಟೆ ಅವಧಿ (200 ಕಿ.ಮೀ)
ಮಿಡಿ ಬಸ್ - 7200 ರೂ.
ಸಾಮಾನ್ಯ - 8000 ರೂ.
ಪುಷ್ಪಕ್ - 9000 ರೂ.

24 ಗಂಟೆ ಅವಧಿ (250 ಕಿ.ಮೀ)

ಮಿಡಿ - 8250 ರೂ.
ಸಾಮಾನ್ಯ - 9000 ರೂ.
ಪುಷ್ಪಕ್ - 10000 ರೂ.

ABOUT THE AUTHOR

...view details