ಕರ್ನಾಟಕ

karnataka

ETV Bharat / city

ಮಹಿಳೆಯನ್ನು ವಿವಸ್ತ್ರಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ್ದ ಬಿಎಂಟಿಸಿ ಚಾಲಕ ಅರೆಸ್ಟ್​: ವಂಚಕನ ಕಥೆ ಹೀಗಿದೆ.. - ವಿವಸ್ತ್ರಗೊಳಿಸಿ ಹಲ್ಲೆ

ವಿವಾಹವಾಗುವುದಾಗಿ ನಂಬಿಸಿ ಆಕೆಯಿಂದ 2.70 ಲಕ್ಷ ರೂ. ಹಣ ಪಡೆದು, ಹಣ ಮರಳಿ ಕೊಡುವುದಾಗಿ ಹೇಳಿದ್ದ ಚಾಲಕ, ಆಕೆಯನ್ನು ತೋಟದ ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯನ್ನು ಕೂಡಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಅರೆಸ್ಟ್​
Arrest

By

Published : Jun 30, 2021, 10:54 PM IST

Updated : Jul 1, 2021, 1:16 AM IST

ಬೆಂಗಳೂರು: ಮಹಿಳೆಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ 2.70 ಲಕ್ಷ ರೂ. ಪಡೆದು ತೋಟದ ಮನೆಯಲ್ಲಿ 2 ದಿನ ವಿವಸ್ತ್ರಗೊಳಿಸಿ ಕೂಡಿಹಾಕಿ ಹಲ್ಲೆ ನಡೆಸಿದ ಬಿಎಂಟಿಸಿ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಸವೇಶ್ವರನಗರ ನಿವಾಸಿಯಾದ 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇರೆಗೆ ಬಿಎಂಟಿಸಿ ಬಸ್ ಚಾಲಕ ವಿಶ್ವನಾಥ್ (42) ಎಂಬಾತನನ್ನು ಪೊಲೀಸರು ಬಂಧಿಸಿ FIR ದಾಖಲಿಸಿದ್ದಾರೆ.

ದೂರುದಾರ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಎಂಟಿಸಿ ಬಸ್‌ನಲ್ಲಿ ದಿನವೂ ಪ್ರಯಾಣಿಸುತ್ತಿದ್ದರು. 2019ರಲ್ಲಿ ಚಾಲಕ ವಿಶ್ವನಾಥ್ ಪರಿಚಯವಾಗಿ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಬಳಿಕ ತಿಪಟೂರಿನಲ್ಲಿರುವ ಮನೆಗೆ ಮಹಿಳೆಯನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ವಿವಾಹವಾಗುವುದಾಗಿ ದೂರುದಾರ ಮಹಿಳೆಯನ್ನು ನಂಬಿಸಿದ್ದ ವಿಶ್ವನಾಥ್, 2.70 ಲಕ್ಷ ರೂ. ಸಹ ಪಡೆದಿದ್ದ. ಹಣ ಪಡೆದು 2 ವರ್ಷ ಕಳೆದರೂ ಹಿಂತಿರುಗಿಸದೇ ಸತಾಯಿಸುತ್ತಿದ್ದ. ಮಾ.23 ರಂದು ನೀಡಬೇಕಿರುವ ಹಣವನ್ನು ಕೊಡುತ್ತೇನೆ ಎಂದು ಹೇಳಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಿಪಟೂರಿನ ಹಾಲುಕುರ್ಕೆ ಬಳಿಯಿರುವ ತೋಟದ ಮನೆಗೆ ಕರೆದುಕೊಂಡು ಹೋಗಿದ್ದ. ತೋಟದ ಮನೆಯಲ್ಲಿ ಆಕೆಯನ್ನು ಕೂಡಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ.

ಇನ್ನು ಹಣ ಕೇಳಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿ, 2 ದಿನಗಳ ಕಾಲ ತೋಟದ ಮನೆಯಲ್ಲೇ ಹಿಂಸೆ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿ ವಿಶ್ವನಾಥ್‌ನನ್ನು ಬಂಧಿಸಿ ವಿಚರಣೆಗೆ ಒಳಪಡಿಸಿದ್ದಾರೆ.

Last Updated : Jul 1, 2021, 1:16 AM IST

ABOUT THE AUTHOR

...view details