ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಸಾರಿಗೆ ಸೇವೆ ಆರಂಭಿಸಿದೆ. ಆದರೆ ಇದೀಗ ಕೊರೊನಾ ಭೀತಿಗೆ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ಗಳು ಬೆಚ್ಚಿಬಿದ್ದಿದ್ದು, ಕೆಲವು ಸಿಬ್ಬಂದಿ ಕೆಲಸಕ್ಕೆ ಹಾಜರಾಗದೆ ಇರುವುದರಿಂದ ಬಸ್ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.
ಕೊರೊನಾ ಭೀತಿ: ಕೆಲಸಕ್ಕೆ ಹಾಜರಾಗದ ಬಿಎಂಟಿಸಿ ಬಸ್ ಸಿಬ್ಬಂದಿ - BMTC bus driver and conductor news
ಕೊರೊನಾ ಹಿನ್ನೆಲೆ ಕರ್ತವ್ಯಕ್ಕೆ ಕೆಲ ಬಿಎಂಟಿಸಿ ಸಿಬ್ಬಂದಿ ಹಾಜರಾಗಿಲ್ಲ. ಈ ಹಿನ್ನೆಲೆ ಕೆಲ ಸಮಸ್ಯೆಗಳು ಎದುರಾಗಿದ್ದು, ಡಿಪೋ ಮ್ಯಾನೇಜರ್ಗಳು ಕೆಲಸಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಸಂದೇಶ ರವಾನೆ ಮಾಡುತ್ತಿದ್ದಾರೆ.
BMTC
ಕೊರೊನಾ ಹಿನ್ನೆಲೆ ಕರ್ತವ್ಯಕ್ಕೆ ಕೆಲವು ಬಿಎಂಟಿಸಿ ಸಿಬ್ಬಂದಿ ಹಾಜರಾಗಿಲ್ಲ. ಇನ್ನೂ ಕೆಲವರು ತಮ್ಮ ಊರು ಬಿಟ್ಟು ನಗರಕ್ಕೆ ಬರುತ್ತಿಲ್ಲ. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಸಿಬ್ಬಂದಿ ಉತ್ತರ ಕರ್ನಾಟಕದವರಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದರೂ ಕೂಡ ಮುಂದಾಗುತ್ತಿಲ್ಲ. ಈಗಾಗಗಲೇ ಡಿಪೋ ಮ್ಯಾನೇಜರ್ಗಳು ಸಿಬ್ಬಂದಿಗೆ ಸಂದೇಶಗಳನ್ನು ರವಾನಿಸಿದ್ದು, ಕೆಲಸಕ್ಕೆ ಹಾಜರಾಗುವಂತೆ ತಿಳಿಸುತ್ತಿದ್ದಾರೆ.