ಬೆಂಗಳೂರು:ಕೊರೊನಾ ಬಂದ ನಂತರ ಸಿಲಿಕಾನ್ ಸಿಟಿಯ ಅಚ್ಚುಮೆಚ್ಚಿನ ಸಾರಿಗೆ ಬಿಎಂಟಿಸಿ ಸಾಕಷ್ಟು ನಷ್ಟಕ್ಕೆ ಒಳಗಾಗಿತ್ತು. ಲಾಕ್ಡೌನ್ ಅಸ್ತ್ರಕ್ಕೆ ಸಿಲುಕಿ ತರಗೆಲೆಯಾದ ಬಿಎಂಟಿಸಿ ಅನ್ಲಾಕ್ ಪ್ರಕ್ರಿಯೆ ಶುರುವಾದ ನಂತರ ಚೇತರಿಕೆ ಕಾಣುತ್ತಿದೆ.
ಅಲ್ಪ ಚೇತರಿಕೆ ಕಂಡ ಬಿಎಂಟಿಸಿ ಕೊರೊನಾಗೂ ಮುನ್ನ ನಗರದಲ್ಲಿ ದಿನನಿತ್ಯ 6 ಸಾವಿರ ಬಸ್ಸುಗಳು ಓಡಾಡುತ್ತಿದ್ದವು. ಆದರೆ ಇದೀಗ ಅರ್ಧದಷ್ಟು ಅಂದರೆ 3 ಸಾವಿರ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿದಿನ 8 ಲಕ್ಷದಷ್ಟು ಮಂದಿ ಸಂಚಾರ ಮಾಡುತ್ತಿದ್ದರೂ ಸಹ ಇಲಾಖೆ 3 ಕೋಟಿ ರೂ. ನಷ್ಟ ಅನುಭವಿಸುತ್ತಿದೆ.
ಕೊರೊನಾ ಹರಡುವಿಕೆ ತಡೆಯಲು ಆನ್ಲೈನ್ ಪೇಮೆಂಟ್..!
ಕೊರೊನಾ ಹರಡುವಿಕೆ ತಡೆಯಲು ಪ್ಲಾನ್ ಮಾಡಿರುವ ನಿಗಮ ಕ್ಯೂ ಆರ್ ಕೋಡ್ ಮೂಲಕ ಆನ್ ಲೈನ್ ಪೇಮೆಂಟ್ ಮಾಡುವ ವ್ಯವಸ್ಥೆ ಉತ್ತೇಜಿಸಿತು. ಬಿಎಂಟಿಸಿ ಪ್ರಯಾಣಿಕರ ಆನ್ಲೈನ್ ಪೇಮೆಂಟ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಪೇಮೆಂಟ್ ಮಾಡೋದು ತುಂಬಾನೇ ಸುಲಭ.
ಪ್ರಯಾಣಿಕರಿಗೆ-ನಿಗಮದ ಸಿಬ್ಬಂದಿಯ ಸುರಕ್ಷತೆಗೆ ಒತ್ತು:
ಕರ್ತವ್ಯ ನಿರ್ವಹಿಸುವ ಡ್ರೈವರ್, ಕಂಡಕ್ಟರ್ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ನಿಗದಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು-ಇಳಿಸುವುದು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಹಾಕದೇ ಇರುವ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.