ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. 1 ಹಾಗೂ 3 ದಿನದ ಪಾಸ್ ವಿತರಿಸಲು ಬಿಎಂಆರ್ಸಿಎಲ್ ಮುಂದಾಗಿದ್ದು, ಏಪ್ರಿಲ್ 2 ರಿಂದ ಈ ಪಾಸ್ ಪ್ರಯಾಣಿಕರ ಕೈ ಸೇರಲಿದೆ. ಒಂದು ದಿನದ ಪಾಸ್ ದರ 200 ರೂಪಾಯಿ ಮತ್ತು ಮೂರು ದಿನದ ಪಾಸ್ ದರ 400 ರೂಪಾಯಿ ನಿಗದಿಪಡಿಸಲಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಪಾಸ್ ಖರೀದಿಸಿದ ಪ್ರಯಾಣಿಕರು ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಮರಳಿಸಿದರೆ, ಪ್ರಯಾಣಿಕರು ಸಂದಾಯ ಮಾಡಿದ್ದ 50 ರೂ. ಭದ್ರತಾ ಠೇವಣಿ ಹಿಂಪಡೆಯಬಹುದು ಎಂದು ಸಂಸ್ಥೆ ಹೇಳಿದೆ.
ಓದಿ:ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಇತಿಹಾಸ: IPLನಲ್ಲಿ ಈ ದಾಖಲೆ ಬರೆದ 2ನೇ ಪ್ಲೇಯರ್!
ಪಾಸ್ ನವೀಕರಣ ವಿಧಾನ:ಪ್ರಯಾಣಿಕರು ಆನ್‌ಲೈನ್‌ನಲ್ಲಿ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿದ ಮೊತ್ತವನ್ನು ಸ್ಮಾರ್ಟ್ ಕಾರ್ಡ್‌ಗೆ ಒಂದು ಗಂಟೆಯ ನಂತರ ಮತ್ತು ರೀಚಾರ್ಜ್ ಮಾಡಿದ ದಿನಾಂಕದಿಂದ 7 ದಿನಗಳ ಒಳಗೆ ಗೇಟ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಅಥವಾ ಕಾರ್ಡ್ ಟಾಪ್ - ಅಪ್ ಟರ್ಮಿನಲ್‌ಗಳಲ್ಲಿ ರೀಚಾರ್ಜ್ ಮಾಡಿದ ದಿನದಿಂದ 15 ದಿನಗಳಲ್ಲಿ ಪಾಸ್ ನವೀಕರಿಸಬಹುದು ಎಂದು ನಮ್ಮ ಮೆಟ್ರೊ ಸಂಸ್ಥೆ ತಿಳಿಸಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸ್ಮಾರ್ಟ್ ಪಾಸ್ ಉಪಯೋಗಿಸದಿದ್ದರೆ ಶುಲ್ಕ ಮರುಪಾವತಿ:ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್‌ಗಳಲ್ಲಿನ ಬ್ಯಾಲೆನ್ಸ್ ಮೊತ್ತವನ್ನು 15 ದಿನಗಳ ಒಳಗೆ ನವೀಕರಿಸಲು ಸಾಧ್ಯವಾಗದಿದ್ದರೆ, ಅಂತಹ ಕ್ಲೈಮ್ ಮಾಡದ ಮೊತ್ತವನ್ನು ರೀಚಾರ್ಜ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ (ಅದೇ ಅಪ್ಲಿಕೇಶನ್ ಮೂಲಕ) ರಿಚಾರ್ಜ್ ಮಾಡಿದ ಮೊತ್ತದಿಂದ ಶೇ 2.5 ರದ್ವತಿ ಶುಲ್ಕ ಕಡಿತಗೊಳಿಸಿ ರೀಚಾರ್ಜ್ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.