ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣದ ಜೊತೆಗೆ ರೈಲಿನ ಕೊನೆಯ ಬೋಗಿಯಲ್ಲಿ ಮಡಚಬಹುದಾದ ಬೈಸಿಕಲ್ ಕೊಂಡೊಯ್ಯಲು ಬೆಂಗಳೂರು ಮೆಟ್ರೋ ರೈಲು ನಿಗಮ ( ಬಿಎಂಆರ್ಸಿಎಲ್) ಅನುಮತಿ ನೀಡಿದೆ. ಜೊತೆಗೆ ಲಗೇಜ್ ಶುಲ್ಕಕ್ಕೂ ವಿನಾಯಿತಿ ನೀಡಲಾಗಿದೆ.
ಹಸಿರು ಉಪಕ್ರಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಈ ನಿರ್ಧಾರ ಕೈಗೊಂಡಿದೆ. ಕೇವಲ ಮಡಚಬಹುದಾದ ಸೈಕಲ್ಗಳನ್ನು ಮಾತ್ರ ಕೊಂಡೊಯ್ಯಬಹುದಾಗಿದೆ. ಸೈಕಲ್ನ ಗಾತ್ರ 60 CM X 45CM X 25CM ಮತ್ತು 15 ಕೆ.ಜಿ ತೂಕವನ್ನು ಮೀರಬಾರದು. ಮೆಟ್ರೋ ನಿಲ್ದಾಣ ಪ್ರವೇಶ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್ ಮೂಲಕ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ.